ಅಗಸ್ತ್ಯಕೂಡಂನಲ್ಲಿ ಮಹಿಳೆಯರಿಗೆ ಪ್ರವೇಶ ಅನುಮತಿ

7

ಅಗಸ್ತ್ಯಕೂಡಂನಲ್ಲಿ ಮಹಿಳೆಯರಿಗೆ ಪ್ರವೇಶ ಅನುಮತಿ

Published:
Updated:

ತಿರುವನಂತಪುರಂ: ಅಗಸ್ತ್ಯಕೂಡಂನಲ್ಲಿ ಮಹಿಳೆಯರಿಗೆ ಪ್ರವೇಶ ಅನುಮತಿ ಕಲ್ಪಿಸಲಾಗಿದೆ. ಜನವರಿ 14ರ ನಂತರ ಅಗಸ್ತ್ಯಕೂಡಂಗೆ ಪ್ರವೇಶಾನುಮತಿ ನೀಡಲಾಗಿದೆ. ಇಲ್ಲಿಗೆ ಹೋಗುವ ಮಹಿಳೆಯರಿಗೆ ವಿಶೇಷ ರೀತಿಯ ಸೌಕರ್ಯ ಒದಗಿಸಲಾಗುವುದಿಲ್ಲ ಎಂದು ಅರಣ್ಯ ಇಲಾಖೆ ಹೇಳಿದೆ. ಚಾರಣಕ್ಕೆ ಇರುವ ಪಾಸ್‍ಗಾಗಿ  5ನೇ ತಾರೀಖಿನಿಂದ ಬುಕ್ಕಿಂಗ್ ಆರಂಭವಾಗಲಿದೆ.

ನೆಯ್ಯಾರ್ ವನ್ಯಜೀವಿ ಅರಣ್ಯದ ಭಾಗವಾಗಿರುವ ಅಗಸ್ತ್ಯಕೂಡಂಗೆ ಭೇಟಿ ನೀಡಲು ಮಹಿಳೆಯರಿಗೆ ನಿಷೇಧವಿತ್ತು. ಮಹಿಳೆಯರಿಗೆ ಪ್ರವೇಶ ನಿಷೇಧ ವಿರುದ್ಧ ಮಹಿಳಾ ಸಂಘಟನೆಗಳು ಮುಷ್ಕರ ನಡೆಸಿದ್ದವು. ಆದಾಗ್ಯೂ ಮಹಿಳೆಯರಿಗೆ ಪ್ರವೇಶಾನುಮತಿ ನೀಡಬೇಕೆಂದು ಕಳೆದ ಡಿಸೆಂಬರ್‌ನಲ್ಲಿ ಹೈಕೋರ್ಟ್ ಆದೇಶಿಸಿತ್ತು. ಅನ್ವೇಷಿ (ಕೋಯಿಕ್ಕೋಡ್), ವಿಮೆನ್ ಇಂಟಿಗ್ರೇಷನ್ ಆ್ಯಂಡ್  ಗ್ರೋತ್ ಥ್ರೂ ಸ್ಫೋರ್ಟ್ಸ್ (ಮಲಪ್ಪುರಂ), ಪೆಣ್ಣೊರುಮ (ಕಣ್ಣೂರು) ಮೊದಲಾದ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿ ಮಹಿಳೆಯರ ಪ್ರವೇಶಕ್ಕಾಗಿ ಒತ್ತಾಯಿಸಿದ್ದವು.

ಆದಾಗ್ಯೂ, ಇಲ್ಲಿ ಚಾರಣಕ್ಕೆ ಬರುವವರಿಗೆ ಪೂಜೆ ಮಾಡಲು  ಅನುಮತಿ ಇಲ್ಲ. ಹಾಗಾಗಿ ಚಾರಣಿಗರು  ಪೂಜಾ ಸಾಮಾಗ್ರಿಗಳನ್ನು ಹೊತ್ತು ತರಬಾರದು ಎಂದು ಅರಣ್ಯ ಇಲಾಖೆ ಹೇಳಿದೆ. 

ಅರಣ್ಯ ದಾರಿಯಾಗಿ ಮೂರು ದಿನ ಪ್ರಯಾಣಿಸಿದರೆ ಅಗಸ್ತ್ಯಕೂಡಂಗೆ ತಲುಪಬಹುದು. ಇಲ್ಲಿಗೆ ಹೋಗುವ ದಾರಿ ದುರ್ಗಮ ಆಗಿರುವುದರಿಂದಲೇ ಉತ್ತಮ ಆರೋಗ್ಯ ಇರುವವರು ಮಾತ್ರ ಈ ಪಯಣಕ್ಕೆ ಮುಂದಾಗಬಹುದು. 14 ವರ್ಷದ ಕೆಳಗಿನವರಿಗೆ ಇಲ್ಲಿ ಪ್ರವೇಶವಿರುವುದಿಲ್ಲ.

 ಜನವರಿ  14ರಿಂದ ಮಾರ್ಚ್ 1ರ ವರೆಗೆ ಅಗಸ್ತ್ಯಕೂಡಂಗೆ ಭೇಟಿ ನೀಡಬಹುದು. ಜನವರ 5 ರಿಂದ www.forest.kerala.gov.in ವೆಬ್‍ಸೈಟ್ ಮೂಲಕ ಆನ್‍ಲೈನ್ ಬುಕ್ಕಿಂಗ್ ಮಾಡಬಹುದು. ಪ್ರತಿದಿನ 100 ಮಂದಿಗೆ ಮಾತ್ರ ಇಲ್ಲಿ ಪ್ರವೇಶ ನೀಡಲಾಗುತ್ತಿದೆ . ₹1000 ಟಿಕೆಟ್ ಶುಲ್ಕ ಇದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !