ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರದಲ್ಲಿ ಮಹಿಳೆಗೆ ಗೃಹ ಖಾತೆ ಜವಾಬ್ದಾರಿ ವಹಿಸಿದ ಸಿಎಂ ಜಗನ್

Last Updated 8 ಜೂನ್ 2019, 14:51 IST
ಅಕ್ಷರ ಗಾತ್ರ

ಆಂಧ್ರಪ್ರದೇಶ:ಐದು ಮಂದಿ ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಿ ಅಚ್ಚರಿ ಮೂಡಿಸಿದ್ದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಈಗ ದಲಿತ ಮಹಿಳೆಗೆ ಗೃಹ ಸಚಿವರನ್ನಾಗಿ ಮಾಡಿ ಮತ್ತೊಂದು ಅಚ್ಚರಿ ಮೂಡಿಸಿದ್ದಾರೆ.

ಆಂಧ್ರದ ಗುಂಟೂರು ಜಿಲ್ಲೆಯ ಪ್ರಾತಿಪಡು ಮೀಸಲು ವಿಧಾನಸಭಾ ಕ್ಷೇತ್ರದ ಮೆಕತೋಟಿ ಸುಚರಿತ ಈಗ ಆಂಧ್ರದ ನೂತನ ಗೃಹಮಂತ್ರಿಯಾಗಿದ್ದಾರೆ. ಇವರು ವಿಭಜಿತ ಆಂಧ್ರದ ಮೊದಲ ಮಹಿಳಾ ಗೃಹಮಂತ್ರಿಯಾಗಿದ್ದಾರೆ. ಅಮರಾವತಿಯಲ್ಲಿ ಶನಿವಾರ ರಾಜ್ಯಪಾಲರಾದ ಇ.ಎಸ್.ಎಲ್.ನರಸಿಂಹನ್ ಅವರು ಎಲ್ಲಾ 25 ಮಂದಿ ನೂತನ ಸಚಿವರಿಗೆ ಶನಿವಾರ ಪ್ರಮಾಣ ವಚನ ಬೋಧಿಸಿದರು.

ಜಗನ್ ತಂದೆ ವೈ.ಎಸ್.ರಾಜಶೇಖರ ರೆಡ್ಡಿ ಆಂಧ್ರ ವಿಭಜನೆಯಾಗುವ ಮುನ್ನ ಪಿ.ಸಬಿತಾ ಇಂದ್ರಾ ರೆಡ್ಡಿ ಎಂಬುವರಿಗೆ ಗೃಹ ಖಾತೆ ನೀಡಿದ್ದರು. ಇದಾದನಂತರ 2014ರಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ಎಂಬುದಾಗಿ ಎರಡು ರಾಜ್ಯಗಳಾಗಿ ವಿಂಗಡಣೆಯಾಯಿತು. ಇದೀಗ ವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಜಗನ್ ತಂದೆಯ ಆಡಳಿತ ನೀತಿಯನ್ನೇ ಅನುಸರಿಸಿದ್ದಾರೆ.

ಇವರು ಐದು ಮಂದಿ ಉಪ ಮುಖ್ಯಮಂತ್ರಿಗಳು:ಪಾಪುಲಪುಷ್ಪ ಶ್ರೀವಾಣಿ ಅವರಿಗೆ ಬುಡಕಟ್ಟು ಖಾತೆ, ಪಿಲ್ಲಿ ಸುಭಾಷ್ ಚಂದ್ರಬೋಸ್ ಕಂದಾಯ ಖಾತೆ, ಅಲ್ಲ ಕಾಳಿ ಕೃಷ್ಣ ಶ್ರೀನಿವಾಸ್ ಅಲಿಯಾಸ್ ಅಲ್ಲನಾನಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ, ಕೆ.ನಾರಾಯಣ ಸ್ವಾಮಿ ಅಬಕಾರಿ ಖಾತೆ, ಅಮ್ಜದ್ ಬಾಷಾ ಶೇಖ್ ಬೇಪಾರಿ ಅವರಿಗೆ ಅಲ್ಪಸಂಖ್ಯಾತ ಅಭಿವೃದ್ದಿ ಖಾತೆಗಳನ್ನು ಹೊಂದಿರುವ ಆಂಧ್ರದ ಐವರು ನೂತನ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT