ಮಹಿಳಾ ದಿನಾಚರಣೆಗೆ 11 ಭಾಷೆ, 11 ಬಣ್ಣಗಳಲ್ಲಿ ಡೂಡಲ್ ಗೌರವ

ಮಂಗಳವಾರ, ಮಾರ್ಚ್ 19, 2019
26 °C

ಮಹಿಳಾ ದಿನಾಚರಣೆಗೆ 11 ಭಾಷೆ, 11 ಬಣ್ಣಗಳಲ್ಲಿ ಡೂಡಲ್ ಗೌರವ

Published:
Updated:

ನವದೆಹಲಿ: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಗೂಗಲ್ ಸಂಸ್ಥೆ 11 ಭಾಷೆ, 11 ಬಣ್ಣಗಳಲ್ಲಿ  ಡೂಡಲ್ ಚಿತ್ರಿಸುವ ಮೂಲಕ ಮಹಿಳೆಯರಿಗೆ ಶುಭಾಶಯ ಕೋರಿದೆ. 

ಗೂಗಲ್ 11 ಬಣ್ಣಗಳ ಬಾಕ್ಸ್‌ನಲ್ಲಿ  ಹಿಂದಿ, ಉರ್ದು, ಬಂಗಾಲಿ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಮಹಿಳೆ ಎಂಬ ಪದವನ್ನು ಬರೆದಿದೆ. 

ಒಮ್ಮೆ ಯಾವುದಾದರೊಂದು ಬಾಕ್ಸ್‌ ಮೇಲೆ ಕ್ಲಿಕ್ ಮಾಡಬೇಕು. ತದನಂತರ ಅಲ್ಲಿ ಒಂದಾದ ಮೇಲೊಂದರಂತೆ ಒಟ್ಟು 14 ಸ್ಫೂರ್ತಿದಾಯಕ ಸಾಲುಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಇದರಲ್ಲಿನ ಮಹಿಳಾ ಸಬಲೀಕರಣ ಸಾರುವ ವಾಕ್ಯಗಳು ಸೇರಿದಂತೆ ಇಡೀ ವಿನ್ಯಾಸದಲ್ಲಿ ಜಗತ್ತಿನ ಕೆಲವು ಮಹಿಳಾ ವಿನ್ಯಾಸಕಾರರ ಶ್ರಮವಿದೆ ಎಂದು ಗೂಗಲ್ ಹೇಳಿದೆ. 

ಇದರಲ್ಲಿ ಭಾರತದ ಇಬ್ಬರು ಮಹಿಳಾ ಸಾಧಕಿಯರಾದ ಮೇರಿಕೋಮ್ ಹಾಗೂ ಎನ್‌.ಎಲ್ ಬೆನೊ ಜೆಫೈನ್ ಅವರ ಸ್ಫೂರ್ತಿದಾಯಕ ಸಾಲುಗಳನ್ನು ಬಳಸಿಕೊಳ್ಳಲಾಗಿದೆ. 

ಬಾಕ್ಸರ್ ಮೇರಿಕೋಮ್ ಅವರು ಕಳೆದ ನವೆಂಬರ್‌ನಲ್ಲಿ ನಡೆದಿದ್ದ ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿ ಚಾರಿತ್ರಿಕ ಸಾಧನೆ ಮಾಡಿದ್ದರು. ಅವರು ಮಹಿಳಾ ಶಕ್ತಿಯನ್ನು ಅನಾವರಣ ಮಾಡುವುದು ಹೀಗೆ...

‘ನೀನು ದುರ್ಬಲಳು ಎಂದು ಹೇಳಬೇಡ. ಏಕೆಂದರೆ ನೀನೊಬ್ಬಳು ಹೆಣ್ಣು’... 

ಎನ್‌.ಎಲ್ ಬೆನೊ ಜೆಫೈನ್ ಇವರು ಮೊದಲ ಅಂಧ ಭಾರತೀಯ ವಿದೇಶಿ ಸೇವಾ ಅಧಿಕಾರಿ. ಮೂಲತಃ ಚೆನ್ನೈನವರು. 

‘ನಮ್ಮ ಮನಸ್ಸುಗಳು ಭಿನ್ನಮತಗಳನ್ನು ಸ್ವೀಕರಿಸಲಾರದಷ್ಟು ಸೂಕ್ಷ್ಮವಾಗಿವೆ’...

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !