ಶನಿವಾರ, ಜೂನ್ 19, 2021
27 °C

ವಿಶ್ವದಲ್ಲಿಯೇ ಮೊದಲ ಬ್ರಾಡ್‌ಗೇಜ್‌ ರೈಲು ಮಾರ್ಗ:ಪುಣೆ–ನಾಸಿಕ್ ಮಧ್ಯೆ ರೈಲು ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಪುಣೆ ಹಾಗೂ ನಾಸಿಕ್‌ ನಡುವೆ ಸೆಮಿ ಹೈಸ್ಪೀಡ್‌ ರೈಲು ಸಂಚಾರಕ್ಕಾಗಿ ಜೋಡಿ ಮಾರ್ಗ ನಿರ್ಮಿಸಲು ರೈಲ್ವೆ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ.

ಬ್ರಾಡ್‌ಗೇಜ್‌ ಮಾರ್ಗದಲ್ಲಿ ಸೆಮಿ ಹೈಸ್ಪೀಡ್‌ ರೈಲು ಸಂಚಾರಕ್ಕಾಗಿ ಮಾರ್ಗ ನಿರ್ಮಾಣವಾಗುತ್ತಿರುವುದು ವಿಶ್ವದಲ್ಲಿಯೇ ಮೊದಲು. ಪ್ರಸ್ತುತ ಕಾರ್ಯಾಚರಿಸುತ್ತಿರುವ ಸೆಮಿಹೈಸ್ಪೀಡ್‌ ರೈಲುಗಳು ನಿರ್ದಿಷ್ಟ ಗೇಜ್‌ನ ಮಾರ್ಗದಲ್ಲಿ ಮಾತ್ರ ಓಡುತ್ತಿವೆ.

ಮಹಾರಾಷ್ಟ್ರ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಮಹಾರೇಲ್‌) ಮತ್ತು ರೈಲ್ವೆ ಸಚಿವಾಲಯದ ಜಂಟಿ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದ್ದು, ಮಹಾರಾಷ್ಟ್ರ ಸರ್ಕಾರ ಹಾಗೂ ರೈಲ್ವೆ ತಲಾ ಶೇ 50ರಷ್ಟು ವೆಚ್ಚ ಭರಿಸಲಿವೆ.

‘ಯೋಜನಾ ವೆಚ್ಚ ₹ 16,039 ಕೋಟಿ ಇದ್ದು, ಮೂರೂವರೆ ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ‘ ಎಂದು ಮಹಾರೇಲ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಕುಮಾರ್ ಜೈಸ್ವಾಲ್‌ ತಿಳಿಸಿದ್ದಾರೆ.

ರೈಲು ಗಂಟೆಗೆ 250 ಕಿ.ಮೀ. ವೇಗದಲ್ಲಿ ಓಡಲು ಸಾಧ್ಯವಾಗುವಂತೆ ಈ ಮಾರ್ಗವನ್ನು ವಿನ್ಯಾಸಗೊಳಿಸಲಾಗುತ್ತದೆ. ಕೈಗಾರಿಕೆಗಳ ದೃಷ್ಟಿಯಿಂದ ಪ್ರಮುಖ ನಗರಗಳಾಗಿರುವ ಪುಣೆ ಮತ್ತು ನಾಸಿಕ್‌ ನಡುವಿನ 231 ಕಿ.ಮೀ ಅಂತರವನ್ನು 2ಗಂಟೆಗೂ ಕಡಿಮೆ ಅವಧಿಯಲ್ಲಿ ಕ್ರಮಿಸಬಹುದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು