ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತಾನ ನಿಯಂತ್ರಣಕ್ಕೆ ಪುರುಷರಿಗೆ ಚುಚ್ಚುಮದ್ದು ಅನ್ವೇಷಣೆ: ಪ್ರಭಾವ 13 ವರ್ಷ!

Last Updated 21 ನವೆಂಬರ್ 2019, 11:35 IST
ಅಕ್ಷರ ಗಾತ್ರ

ನವದೆಹಲಿ: ಪುರುಷರಿಗೆ ಚುಚ್ಚುಮದ್ದಿನ ರೂಪದಲ್ಲಿನೀಡಬಹುದಾದ ಜಗತ್ತಿನ ಮೊದಲ ಗರ್ಭ ನಿರೋಧಕ ಔಷಧವನ್ನು ಭಾರತೀಯ ವೈದ್ಯಕೀಯ ಅಧ್ಯಯನ ಸಂಸ್ಥೆ (ಐಸಿಎಂಆರ್‌) ಅನ್ವೇಷಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಭಾರತೀಯ ಔಷಧ ನಿಯಂತ್ರಣಾ ಸಂಸ್ಥೆಯ (ಡಿಸಿಜಿಐ) ಅಂಗೀಕಾರ ಸಿಗುವುದೊಂದೇ ಬಾಕಿ ಉಳಿದಿದೆ ಎಂದು ಔಷಧದ ಅಧ್ಯಯನದಲ್ಲಿ ತೊಡಗಿದ್ದ ತಜ್ಞರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಚುಚ್ಚುಮದ್ದಾಗಿ ನೀಡುವ ಈ ಔಷಧವು 13 ವರ್ಷಗಳ ಕಾಲ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅದಾದ ನಂತರ ತನ್ನ ಕಾರ್ಯಕ್ಷಮತೆ ಕಳೆದುಕೊಳ್ಳುತ್ತದೆ. ಸದ್ಯ ಸಂತಾನ ನಿಯಂತ್ರಣಕ್ಕೆ ಪುರುಷರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ (vasectomy)ಯೊಂದೇ ವೈದ್ಯಕೀಯ ಮಾರ್ಗ. ಈ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸದ್ಯ ಅನ್ವೇಷಣೆಗೊಂಡಿರುವ ಔಷಧವು ಪರ್ಯಾಯವಾಗಲಿದೆ.

‘ಪುರಷರಿಗೆ ನೀಡಲಾಗುವ ಈ ಸಂತಾನ ನಿಯಂತ್ರಣ ಔಷಧ ಸಿದ್ಧವಾಗಿದೆ. ಡಿಸಿಜಿಐ ಒಪ್ಪಿಗೆಯೊಂದೇ ಬಾಕಿ ಇದೆ. ಪ್ರಯೋಗವೂ ಮುಗಿದಿದೆ. 303 ಜನರ ಮೇಲೆ ನಡೆದ ಪ್ರಯೋಗದಲ್ಲಿ ಶೇ. 97.3%ರಷ್ಟು ಸಫಲತೆ ಸಿಕ್ಕಿದೆ. ಅಡ್ಡಪರಿಣಾಮಗಳೂ ಕಂಡು ಬಂದಿಲ್ಲ,’ ಎಂದು ಐಸಿಎಂಆರ್‌ನ ಹಿರಿಯ ವಿಜ್ಞಾನಿ ಡಾ. ಆರ್‌. ಶರ್ಮಾ ಹೇಳಿದ್ದಾರೆ ಎಂದು ‘ಹಿಂದೂಸ್ಥಾನ್‌ ಟೈಮ್ಸ್‌’ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT