ಪಾನ್ ಶಾಪ್ ಮುಂದೆಯೂ ಇಷ್ಟು ಜನ ಸೇರುತ್ತಾರೆ: ಸಂಕಲ್ಪ ರ್‍ಯಾಲಿ ಬಗ್ಗೆ ಲಾಲು ಲೇವಡಿ

ಗುರುವಾರ , ಮಾರ್ಚ್ 21, 2019
25 °C

ಪಾನ್ ಶಾಪ್ ಮುಂದೆಯೂ ಇಷ್ಟು ಜನ ಸೇರುತ್ತಾರೆ: ಸಂಕಲ್ಪ ರ್‍ಯಾಲಿ ಬಗ್ಗೆ ಲಾಲು ಲೇವಡಿ

Published:
Updated:

ಪಟ್ನಾ: ನರೇಂದ್ರ ಮೋದಿ, ನಿತೀಶ್ ಕುಮಾರ್ ಮತ್ತು ಪಾಸ್ವಾನ್ ತಿಂಗಳುಗಳಿಂದ ಶ್ರಮವಹಿಸಿ ಸರ್ಕಾರಿ ಸೌಲಭ್ಯಗಳನ್ನು ಬಳಸಿ ಗಾಂಧಿ ಮೈದಾನದಲ್ಲಿ ಅಷ್ಟೊಂದು ಜನ ಸೇರಿಸಿದ್ದಾರೆ. ನಾವು ಪಾನ್(ಬೀಡಾ) ತಿನ್ನುವುದಕ್ಕೆ ಗಾಡಿ ನಿಲ್ಲಿಸಿ ಪಾನ್ ಅಂಗಡಿಗೆ ಹೋದರೆ ಇಷ್ಟು ಜನ ಅಲ್ಲಿಯೂ ಸೇರುತ್ತಾರೆ. ಜನರೇ ನೀವು ಅಲ್ಲಿಗೆ ಹೋಗಿ ಕ್ಯಾಮೆರಾ ಜೂಮ್ ಮಾಡಿ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಟ್ವೀಟ್ ಮಾಡಿದ್ದಾರೆ.

ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಎನ್‍ಡಿಎ ಸಂಕಲ್ಪ ರ್‍ಯಾಲಿ ಬಗ್ಗೆ ಲೇವಡಿ ಮಾಡಿದ ಲಾಲು, ರ್‍ಯಾಲಿಯಲ್ಲಿ ಹೆಚ್ಚು ಜನ ಸೇರಿದ್ದಾರೆ ಎಂದು ತೋರಿಸಲು ಆಯೋಜಕರು ಕ್ಯಾಮೆರಾ ಟ್ರಿಕ್ ಬಳಸುತ್ತಾರೆ. ಕ್ಯಾಮೆರಾ ಜೂಮ್ ಮಾಡಿ ತೋರಿಸುವ ಬದಲು ಅಲ್ಲಿ ನೆರಿದಿರುವ ಜನರೆಷ್ಟು ಎಂಬುದನ್ನು ತೋರಿಸುವ ನಿಜವಾದ ವಿಡಿಯೊ ದೃಶ್ಯಗಳನ್ನೇ ತೋರಿಸಿ ಎಂದು ನಾಯಕರಿಗೆ ಹೇಳಿದ್ದಾರೆ ಲಾಲು.

ಪಟ್ನಾದಲ್ಲಿ ನಡೆದ ಸಂಕಲ್ಪ ರ್‍ಯಾಲಿ ಭ್ರಮೆ ಎಂದ ಅವರು ಮೋದಿ, ಕುಮಾರ್ ಮತ್ತು ಪಾಸ್ವಾನ್ ಸರ್ಕಾರಿ ಸೌಲಭ್ಯಗಳನ್ನು ಬಳಸಿಯೂ ಈ ಮೆಗಾ ರ್‍ಯಾಲಿಯನ್ನು ಆಯೋಜಿಸಲು ಕಷ್ಟಪಟ್ಟರು ಎಂದಿದ್ದಾರೆ.
 

ಬರಹ ಇಷ್ಟವಾಯಿತೆ?

 • 16

  Happy
 • 3

  Amused
 • 0

  Sad
 • 1

  Frustrated
 • 6

  Angry

Comments:

0 comments

Write the first review for this !