ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವು ಮುಟ್ಟಾದಾಗ ನಿಮ್ಮ ಸ್ನೇಹಿತರ ಮನೆಗೆ ಹೋಗುತ್ತೀರಾ? : ಸ್ಮೃತಿ ಇರಾನಿ

Last Updated 23 ಅಕ್ಟೋಬರ್ 2018, 12:50 IST
ಅಕ್ಷರ ಗಾತ್ರ

ನವದೆಹಲಿ:'ಎಲ್ಲರಿಗೂ ಪ್ರಾರ್ಥಿಸುವ ಹಕ್ಕು ಇದೆ ಎಂಬುದನ್ನು ನಾನು ನಂಬುತ್ತೇನೆ ಆದರೆ ಯಾವುದನ್ನೂ ಅಪವಿತ್ರಗೊಳಿಸುವ ಹಕ್ಕು ನನಗಿಲ್ಲ.ಈ ವೈರುಧ್ಯವನ್ನು ನಾವು ಅರಿತು ಗೌರವಿಸಬೇಕು. ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಹೇಳಲು ನಾನು ಯಾರೂ ಅಲ್ಲ ಯಾಕೆಂದರೆ ನಾನು ಸದ್ಯ ಕೇಂದ್ರಸಚಿವೆ'ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಮುಂಬೈಯ ಯಂಗ್ ಥಿಂಕರ್ಸ್ ಸಮ್ಮೇಳನದಲ್ಲಿ ಮಾತನಾಡಿದ ಸ್ಮೃತಿಇದು ಸಾಮಾನ್ಯ ಪ್ರಜ್ಞೆಯ ವಿಷಯ. ಮುಟ್ಟಿನ ರಕ್ತದಿಂದ ಕೂಡಿದ ಸ್ಯಾನಿಟರಿ ನ್ಯಾಪ್‌‍ಕಿನ್‍ನ್ನು ನೀವು ನಿಮ್ಮ ಸ್ನೇಹಿತರ ಮನೆಗೆ ತೆಗೆದುಕೊಂಡು ಹೋಗುತ್ತೀರಾ? ಇಲ್ಲ ಅಲ್ಲವೇ?.ಅದೇ ರೀತಿ ನೀವು ದೇವರ ಕೋಣೆಗೆ ಹೋಗುವುದು ಸರಿಯೇ? ವ್ಯತ್ಯಾಸ ಇರುವುದೇ ಇಲ್ಲಿ ಎಂದಿದ್ದಾರೆ .

ಸ್ಮೃತಿ ಇರಾನಿ ಹೇಳಿಕೆಗೆ ಟ್ವೀಟ್ ಟೀಕೆ

ಭಾರತದಲ್ಲಿ ಮುಟ್ಟಿನ ದಿನಗಳಲ್ಲಿ ರಜೆ ಪಡೆಯುವ ಏಕೈಕ ಮಹಿಳೆ ಸ್ಮೃತಿ ಇರಾನಿ. ಮುಟ್ಟಿನ ದಿನಗಳಲ್ಲಿ ಆಕೆ ತಮ್ಮ ಸಚಿವಾಲಯದೊಳಗೆ ರಕ್ತದಿಂದ ಕೂಡಿದ ನ್ಯಾಪ್‍ಕಿನ್ ತೆಗೆದುಕೊಂಡು ಹೋಗುವುದಿಲ್ಲವೇನೋ

ನೀವು ನಿಮ್ಮ ಸ್ನೇಹಿತರ ಮನೆಗೆ ಹೋಗುವಾಗ ಸ್ಯಾನಿಟರಿ ನ್ಯಾಪ್‌‍ಕಿನ್ ಬಳಸುತ್ತೀರಾ? ಎಂದು ಸ್ಮೃತಿ ಇರಾನಿ ಕೇಳುತ್ತಾರೆ. ಹೌದು, ಹೆಚ್ಚಿನ ಮಹಿಳೆಯರು ಬಳಸುತ್ತಾರೆ. ನೀವು ಹೇಗೆ? ಆ ದಿನಗಳಲ್ಲಿ ನೀವು ಕೆಲಸಕ್ಕೆ ಹೋಗುತ್ತೀರಾ ಅಥವಾ 5 ದಿನ ಮನೆಯಲ್ಲಿಯೇ ಇರುತ್ತೀರಾ?

"Would you wear a sanitary pad and go to a friend's house?" asks Smriti Irani. Duh. Yes. Most women do. What about you ma'am, would you wear one and go to work, or stay home for 5 days a month? https://t.co/lUC1CXPefu

ಸ್ಮೃತಿ ಇರಾನಿ ಹೇಳಿಕೆ ನಾಚಿಕೆಗೇಡಿನದ್ದು. ಮುಟ್ಟಾಗುವ ಮಹಿಳೆ ಎಂದರೆ ಈಕೆಗೆ ಸ್ಯಾನಿಟರಿ ಪ್ಯಾಡ್ ಅಷ್ಟೆಯೇ? ಆಕೆ (ಸ್ಮೃತಿ) ಮುಟ್ಟಾದಾಗ ಮನೆಯಿಂದ ಹೊರಗೆ ಹೋಗುವುದಿಲ್ಲವೇ? ಸ್ನೇಹಿತರ ಮನೆಗೆ ಹೋಗುವುದಿಲ್ಲವೇ? ಮುಟ್ಟಾಗದೆ ಮಕ್ಕಳಾಗುತ್ತದೆಯೇ? ಸಚಿವೆಯಿಂದ ಈ ರೀತಿಯ ಹೇಳಿಕೆ!!

Shameful comment by Smriti Irani. Is menstruating woman only a sanitary pad 4 this lady? When she has periods, doesn't she go out of her house? Doesn't go 2 her friend's place? Without periods, can there be babies? Horrible words reinforcing patriarchy & misogyny by a Minister! https://t.co/3HYAE1Azul

ಮುಟ್ಟಾದಾಗ ಸ್ಮೃತಿ ಇರಾನಿ ಹೊರಗೆ ಹೋಗುವುದಿಲ್ಲ. ಆಕೆ ಮನೆಯಲ್ಲೇ ಇರುತ್ತಾರೆ.

Mind you! Smriti Irani doesn't go out when on her periods. She remains under house arrest for a week. #SmritiIrani

ಸ್ಯಾನಿಟರಿ ನ್ಯಾಪ್‍ಕಿನ್ ಹೇಳಿಕೆ; ಸ್ಮೃತಿ ಹೇಳಿದ್ದು ಒಂದು ಜನ ಅರ್ಥೈಸಿದ್ದು ಇನ್ನೊಂದು?

ಸ್ಮೃತಿ ಇರಾನಿಯವರ ಸ್ಯಾನಿಟರಿ ನ್ಯಾಪ್‌‍ಕಿನ್ ಹೇಳಿಕೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ಸ್ಮೃತಿ ಹೇಳಿದ್ದೇನು?

ಸಮ್ಮೇಳನದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಶಬರಿಮಲೆಯ ಬೇಸ್ ಕ್ಯಾಂಪ್‍ಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರಶ್ನೆ ಕೇಳಿದಾಗ ಸ್ಮತಿ ಇರಾನಿ ತಮ್ಮ ಕುಟುಂಬದ ನಂಬಿಕೆಯ ಉದಾಹರಣೆಯನ್ನು ನೀಡಿದ್ದಾರೆ.
ನಾನು ಹಿಂದೂ, ಮದುವೆಯಾಗಿದ್ದು ಪಾರ್ಸಿಯನ್ನು. ನಮ್ಮ ಮಕ್ಕಳಿಬ್ಬರು ಜೊರೊಯಾಸ್ಟ್ರಿನಿಸಂ ನಂಬಿಕೆ ಇರುವವರು.ಅವರಿಬ್ಬರೂ ನವ್ಜೋತ್ ಮಾಡಿಕೊಂಡಿದ್ದಾರೆ.(ಜೊರೊಯಾಸ್ಟ್ರಿಯನ್ ಧರ್ಮಕ್ಕೆ ಸೇರುವಾಗ ಮಾಡುವ ಧಾರ್ಮಿಕ ವಿಧಿವಿಧಾನ.ಈ ರೀತಿ ವಿಧಿವಿಧಾನ ಮಾಡಿಸಿಕೊಂಡ ಮೇಲೆ ಅವರು ಸುದ್ರೇಹ್ ಮತ್ತು ಕುಸ್ಟಿ (ವಸ್ತ್ರ) ಧರಿಸುತ್ತಾರೆ) . ನಾನು ಅಂಧೇರಿಯಲ್ಲಿರುವ ಅಗ್ನಿ ದೇಗುಲಕ್ಕೆ ನನ್ನ ಮಗುವನ್ನು ಕರೆದುಕೊಂಡು ಹೋಗಿದ್ದಾಗ ನಾನು ಮಗುವನ್ನು ಗಂಡನ ಕೈಯಲ್ಲಿ ಕೊಡಬೇಕಿತ್ತು. ನಾನು ದೇಗುಲದ ಗೇಟ್ ಬಳಿ ನಿಂತಾಗ ನೀನು ಇಲ್ಲಿ ನಿಲ್ಲಬೇಡ ಎಂದು ನನ್ನನ್ನು ಅಲ್ಲಿಂದ ಹೋಗುವಂತೆ ಹೇಳಿದರು. ಆ ದೇವಾಲಯಕ್ಕೆ ನಾನು ನನ್ನ ಗಂಡ ಮತ್ತು ಮಕ್ಕಳೊಂದಿಗೆ ಹೋಗುವಂತಿಲ್ಲ.ನಾನು ಅವರು ದೇವಸ್ಥಾನಕ್ಕೆ ಹೋದಾಗ ರಸ್ತೆಯಲ್ಲಿಯೂ ಕಾರಿನಲ್ಲಿಯೋ ಕುಳಿತು ಕಾಯುತ್ತಿರುತ್ತೇನೆ.
ಸ್ಯಾನಿಟರಿ ನ್ಯಾಪ್‍ಕಿನ್ ವಿಷಯ ಯಾಕೆ ಬಂತು?

ನೀವು ರಕ್ತದಿಂದ ಕೂಡಿದ ಸ್ಯಾನಿಟರಿ ನ್ಯಾಪ್‌ಕಿನ್ ಅನ್ನು ನಿಮ್ಮ ಸ್ನೇಹಿತರ ಮನೆಗೆ ತೆಗೆದುಕೊಂಡು ಹೋಗುತ್ತೀರಾ? ಇಲ್ಲ ಅಲ್ಲವೇ? ಅದೇ ರೀತಿ ದೇವಸ್ಥಾನಕ್ಕೆ ಹೋಗುವಾಗಲೂ ಮಾಡ್ತೀರಾ? ಎಂದು ಸ್ಮ ತಿ ಹೇಳಿದ್ದು ಕಳೆದ ವಾರ ಶಬರಿಮಲೆ ಪ್ರವೇಶಿಸಲು ಯತ್ನಿಸಿದ ಮಹಿಳೆಯೊಬ್ಬರು ಬಳಸಿದ ಸ್ಯಾನಿಟರಿ ನ್ಯಾಪ್‍ಕಿನ್ಅನ್ನು ದೇಗುಲದೊಳಗೆ ಕೊಂಡೊಯ್ಯಲು ಯತ್ನಿಸಿದ್ದರು ಎಂಬ ಸುದ್ದಿ ಬಗ್ಗೆ ನೀವು ಏನು ಹೇಳ್ತೀರಾ ಎಂಬ ಪ್ರಶ್ನೆಗೆ ಉತ್ತರವಾಗಿತ್ತು ಎಂದು ಎನ್‍ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT