ಮಕ್ಕಳಿಗೆ ಬರೆಯುವುದು ಕಠಿಣ: ಸುಧಾಮೂರ್ತಿ

7

ಮಕ್ಕಳಿಗೆ ಬರೆಯುವುದು ಕಠಿಣ: ಸುಧಾಮೂರ್ತಿ

Published:
Updated:
ಸುಧಾಮೂರ್ತಿ

ನವದೆಹಲಿ: ‘ದಿ ಸರ್ಪೆಂಟ್ಸ್ ರಿವೇಂಜ್’, ‘ಹೌ ಐ ಥಾಟ್ ಮೈ ಗ್ರಾಂಡ್‌ಮದರ್ ಟು ರೀಡ್’, ‘ಡಾಲರ್ ಸೊಸೆ’ಯಂತಹ ಪುಸ್ತಕಗಳನ್ನು ಓದುತ್ತಿದ್ದರೆ, ಲೇಖಕಿ ಸುಧಾಮೂರ್ತಿ ಅವರಿಗೆ ಮಕ್ಕಳ ಪುಸ್ತಕಗಳನ್ನು ಬರೆಯುವುದು ಎಷ್ಟು ಸರಾಗ ಎಂದು ತಿಳಿಯುತ್ತದೆ. ಆದರೆ ‘ಮಕ್ಕಳಿಗಾಗಿ ಬರೆಯುವುದು ಕಠಿಣ’ ಎನ್ನುತ್ತಾರೆ ಅವರು. 

‘ಮಕ್ಕಳ ವಯೋಮಾನಕ್ಕೆ ಹಾಗೂ ಮನಸ್ಥಿತಿಗೆ ಇಳಿದು, ಅವರಿಗೆ ಇಷ್ಟವಾಗುವಂತೆ ಬರೆಯುವುದು ನಿಜಕ್ಕೂ ಸವಾಲಿನ ಕೆಲಸ’ ಎನ್ನುತ್ತಾರೆ ಸುಧಾಮೂರ್ತಿ.

‘ಮಗುವಿಗೆ ಪ್ರತಿ ವಿಚಾರವೂ ಅದ್ಭುತವೇ. ಹೆತ್ತವರ ಜೊತೆ ದೇವಸ್ಥಾನಕ್ಕೆ ಹೋಗುವುದೂ ಮಗುವಿಗೆ ಅಚ್ಚರಿಯ ವಿದ್ಯಮಾನ. ಮಗುವಿನ ಆನಂದ, ಉತ್ಸಾಹಗಳು ನನ್ನ ಬರವಣಿಗೆಯಲ್ಲಿ ಪ್ರತಿಫಲಿತವಾಗಬೇಕೆಂದು ನಾನು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ಹಿಯರ್, ದೇರ್ ಅಂಡ್ ಎವೆರಿವೇರ್’ ಎಂಬ ಪುಸ್ತಕವನ್ನು ಇತ್ತೀಚೆಗೆ ಅವರು ಹೊರತಂದಿದ್ದಾರೆ. ವಿವಿಧ ಭಾಷೆಯವೂ ಸೇರಿದಂತೆ ಇದು ಅವರು 200ನೇ ಪುಸ್ತಕ.

‘ಮೊದಲಿಗೆ ಭೇಟಿಯಾದ ದಿನ ನಾರಾಯಣಮೂರ್ತಿ ಅವರು ಪುಸ್ತಕ ಉಡುಗೊರೆ ನೀಡಿದ್ದರು. ಈಗಲೂ ಅದು ಮುಂದುವರಿದಿದೆ’ ಎಂದು ಸುಧಾ ತಮ್ಮ ಪತಿಯನ್ನು ಸ್ಮರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !