ಭಾನುವಾರ, ಅಕ್ಟೋಬರ್ 20, 2019
27 °C

‘ತಪ್ಪು ತೀರ್ಪು ನೀಡದವರೇ ಇಲ್ಲ’

Published:
Updated:

ನವದೆಹಲಿ: ‘ತಪ್ಪು ತೀರ್ಪು ನೀಡಿಲ್ಲ’ ಎಂದು ಯಾವುದೇ ನ್ಯಾಯಮೂರ್ತಿ ಹೇಳಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ತಪ್ಪು ತೀರ್ಪು ನೀಡಿದ್ದಾರೆ ಎಂಬ ಕಾರಣಕ್ಕೆ ನ್ಯಾಯಮೂರ್ತಿಗಳು ಅಥವಾ ನ್ಯಾಯಾಧೀಶರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗದು. ಆದರೆ ಬಾಹ್ಯ ಒತ್ತಡಕ್ಕೆ ಒಳಗಾಗಿ ಅಂತಹ ತೀರ್ಪು ನೀಡಿದ್ದಾರೆ ಎಂಬ ಸಾಕ್ಷ್ಯ ಇದ್ದರೆ ಮಾತ್ರ ಶಿಸ್ತು ಕ್ರಮ ಸಾಧ್ಯ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ತಪ್ಪು ಮಾಡುವುದು ಮಾನವಸಹಜ. ತಪ್ಪು ಆದೇಶವನ್ನು ನೀಡಿಯೇ ಇಲ್ಲ ಎಂದು ನಮ್ಮನ್ನೂ ಸೇರಿಸಿ ಯಾರೂ ಹೇಳಿಕೊಳ್ಳಲಾಗದು’ ಎಂದು ನ್ಯಾಯಮೂರ್ತಿಗಳಾದ ದೀಡಪಕ್‌ ಗುಪ್ತಾ ಮತ್ತು ಅನಿರುದ್ಧ ಅವರ ಪೀಠವು ಹೇಳಿದೆ.

Post Comments (+)