ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಣಾಂತಿಕ ಕೊರೊನಾ ವೈರಸ್‌ ಸೋಂಕಿಗೆ ಸ್ಪೇನ್‌ ದೇಶದ ರಾಜಕುಮಾರಿ ಬಲಿ

Last Updated 29 ಮಾರ್ಚ್ 2020, 8:02 IST
ಅಕ್ಷರ ಗಾತ್ರ

ಜಾಗತಿಕ ಪಿಡುಗೆಂದು ಪರಿಗಣಿಸಲ್ಪಟ್ಟಿರುವ ಮಾರಣಾಂತಿಕ ಕೊರೊನಾ ವೈರಸ್‌ ಸೋಂಕು ಸ್ಪೇನ್‌ ದೇಶದ ರಾಜಕುಮಾರಿಯನ್ನು ಬಲಿ ತೆಗೆದುಕೊಂಡಿದೆ.

86 ವರ್ಷದ ರಾಜಕುಮಾರಿ ಮಾರಿಯಾ ತೆರೇಸಾ ಅವರಲ್ಲಿ ಕೋವಿಡ್‌-19 ಪತ್ತೆಯಾಗಿದ್ದು, ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದಾರೆಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಮಾರಿಯಾ ತೆರೇಸಾ ಅವರು ಸ್ಪೇನ್‌ ರಾಜಕುಮಾರ ಫೆಲಿಪೆ VI ಅವರ ಸೋದರ ಸಂಬಂಧಿಯಾಗಿದ್ದಾರೆ.
ತೆರೇಸಾ ಮೃತಪಟ್ಟ ವಿಚಾರವನ್ನು ಅವರ ಸೋದರ 'ಪ್ರಿನ್ಸ್ ಸಿಕ್ಸ್‌ಟೊ ಎನ್ರಿಕ್ ಡಿ ಬೊರ್ಬನ್' ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

'ನಮ್ಮ ಸಹೋದರಿ ಮಾರಿಯಾ ತೆರೇಸಾ ಡಿ ಬೊರ್ಬನ್‌ ಅವರು ಕೋವಿಡ್‌-19ನಿಂದ ಮೃತಪಟ್ಟಿದ್ದಾರೆ' ಎಂದು ತಿಳಿಸಿದ್ದಾರೆ.

ರಾಜಕುಮಾರಿಯ ಅಂತ್ಯಕ್ರಿಯೆಯನ್ನು ಶುಕ್ರವಾರ ಮ್ಯಾಡ್ರಿಡ್‌ನಲ್ಲಿ ನಡೆಸಲಾಗಿದೆ.

1933ರಲ್ಲಿ ಜನಿಸಿದ್ದ ಮಾರಿಯಾ ತೆರೇಸಾ ಅವರು ಪ್ಯಾರಿಸ್‌ನಲ್ಲಿ ಅಧ್ಯಾಪಕ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಹಲವು ಚಳುವಳಿಗಳಲ್ಲಿ ಸಕ್ರೀಯರಾಗಿದ್ದ ಅವರನ್ನು 'ರೆಡ್‌ ಪ್ರಿನ್ಸ್‌' ಎಂದೇ ಜನರು ಕರೆಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT