2019 ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲುವಿಗಾಗಿ ಯಜ್ಞ 

7

2019 ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲುವಿಗಾಗಿ ಯಜ್ಞ 

Published:
Updated:

ನವದೆಹಲಿ: 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆಲುವಿಗಾಗಿ ಮಥುರಾದ ಯಮುನಾ ನದಿ ತೀರದಲ್ಲಿ ಅಕ್ಟೋಬರ್ 10ರಂದು 10 ದಿನಗಳ ಯಜ್ಞ ನಡೆಯಲಿದೆ.

ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು ಮತ್ತು ಹಿರಿಯ ಆಡಳಿತಗಾರರು ಈ ಯಜ್ಞದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಥುರಾದ ಮೋದಿ ಚಾರಿಟೇಬಲ್ ಟ್ರಸ್ಟ್ ಶತಚಂಡಿ ಮಹಾಯಜ್ಞವನ್ನು ಹಮ್ಮಿಕೊಂಡಿದ್ದು, ಹಲವಾರು ಪಂಡಿತರು, ಸ್ವಾಮಿಗಳು ಭಾಗವಹಿಸಲಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಸಾವಿರಾರು ಹಣತೆ ಬೆಳಗಿ ಮಂತ್ರೋಚ್ಛಾರಣೆ ಮಾಡಿ ಧನಾತ್ಮಕ ಶಕ್ತಿಯನ್ನು ಉತ್ತೇಜಿಸುವ ಮೂಲಕ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಪ್ರಾರ್ಥಿಸಲಾಗುವುದು. ಯಜ್ಞಕ್ಕಾಗಿ ಪೂರ್ವ ತಯಾರಿಗಳು ನಡೆಯುತ್ತಿವೆ ಎಂದು ಮೋದಿ ಟ್ರಸ್ಟ್ ನ ಅಧ್ಯಕ್ಷ ಪವನ್ ಪಾಂಡೆ ಹೇಳಿದ್ದಾರೆ.
 

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 1

  Sad
 • 1

  Frustrated
 • 4

  Angry

Comments:

0 comments

Write the first review for this !