ಸಾವಿರ ಜನರಿಂದ ಯೋಗ ಪ್ರದರ್ಶನ

7
ಪುಣೆಯಲ್ಲಿ ಬಿಕೆಎಸ್‌ ಜನ್ಮಶತಮಾನೋತ್ಸವ

ಸಾವಿರ ಜನರಿಂದ ಯೋಗ ಪ್ರದರ್ಶನ

Published:
Updated:

ಪುಣೆ: ವಿಶ್ವ ಪ್ರಸಿದ್ಧ ಯೋಗ ಗುರು ಕೋಲಾರದ ಬಿ.ಕೆ.ಎಸ್‌. ಅಯ್ಯಂಗಾರ್‌ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ಮಹಾರಾಷ್ಟ್ರದಲ್ಲಿ ಆಯೋಜಿಸಿರುವ ಯೋಗ ಪ್ರದರ್ಶನದಲ್ಲಿ ಒಂದು ಸಾವಿರ ಜನರು ಪಾಲ್ಗೊಂಡಿದ್ದಾರೆ.

ಶ್ರೀ ಶಿವಛತ್ರಪತಿ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ಡಿಸೆಂಬರ್‌ 3ರಿಂದ ಯೋಗ ಪ್ರದರ್ಶನ ಆರಂಭವಾಗಿದ್ದು, 14ರವರೆಗೆ ನಡೆಯಲಿದೆ.

50ಕ್ಕೂ ಹೆಚ್ಚು ದೇಶಗಳ ಸಾವಿರಕ್ಕೂ ಅಧಿಕ ಯೋಗಪಟುಗಳು ‘ಅಯ್ಯಂಗಾರ್‌ ಯೋಗ ಪ್ರದರ್ಶನ‘ದಲ್ಲಿ ಭಾಗವಹಿಸಿದ್ದಾರೆ ಎಂದು ಬಿಕೆಎಸ್‌ ಮಗಳು ಗೀತಾ ಅಯ್ಯಂಗಾರ್‌  ತಿಳಿಸಿದರು.

ಅಯ್ಯಂಗಾರ್‌ ಯೋಗ ಹಾಗೂ ವಿಶೇಷ ವಿನ್ಯಾಸದ ಚಾಪೆಗಳ ಪೇಟೆಂಟ್‌ ಪಡೆದುಕೊಳ್ಳುವಂತೆ ಹಲವರು ಸಲಹೆ ನೀಡಿದ್ದಾರೆ. ಆದರೆ, ಪ್ರಾಚೀನ ಯೋಗದ ಪ್ರಯೋಜನವನ್ನು ಎಲ್ಲರೂ ಪ‍ಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಆ ನಿಟ್ಟಿನಲ್ಲಿ ಮನಸ್ಸು ಮಾಡಲಿಲ್ಲ ಎಂದು ಮೊಮ್ಮಗಳು ಅಭಿಜಿತ್‌ ಅಯ್ಯಂಗಾರ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !