ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಲಾಕ್‌ಡೌನ್‌ ವೇಳೆ ಫಿಟ್ನೆಸ್‌ ಹೇಗೆ? ಯೋಗ ನನ್ನ ಜೀವನದ ಭಾಗ: ಮೋದಿ 

Last Updated 30 ಮಾರ್ಚ್ 2020, 6:16 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಯೋಗಾಭ್ಯಾಸದ 3ಡಿ ಆ್ಯನಿಮೇಟೆಡ್‌ ವಿಡಿಯೊಗಳನ್ನು ಪ್ರಕಟಿಸಿಕೊಳ್ಳುವ ಮೂಲಕ ತಮ್ಮ ಫಿಟ್ನೆಸ್‌ ಗುಟ್ಟನ್ನು ಮತ್ತೊಮ್ಮೆ ಜನರ ಮುಂದಿಟ್ಟಿದ್ದಾರೆ.

'ನಾನು ಫಿಟ್ನೆಸ್‌ ಎಕ್ಸ್‌ಪರ್ಟ್‌ ಅಲ್ಲ ಅಥವಾ ವೈದ್ಯಕೀಯ ಪರಿಣತನೂ ಅಲ್ಲ. ಯೋಗಾಭ್ಯಾಸ ಹಲವು ವರ್ಷಗಳಿಂದ ನನ್ನ ಜೀವನದ ಭಾಗವೇ ಆಗಿದೆ ಹಾಗೂ ಅದರಿಂದ ನಾನು ಸಾಕಷ್ಟು ಲಾಭ ಪಡೆದಿದ್ದೇನೆ. ನಿಮ್ಮಲ್ಲಿ ಅನೇಕರು ಫಿಟ್‌ ಆಗಿ ಇರಲು ಹಲವು ಮಾರ್ಗಗಳನ್ನು ಕಂಡುಕೊಂಡಿರುವಿರಿ ಎಂದು ನಂಬಿದ್ದೇನೆ., ಅದನ್ನು ನೀವು ಇತರರೊಂದಿಗೂ ಹಂಚಿಕೊಳ್ಳಿ' ಎಂದು ಟ್ವೀಟಿಸುವ ಮೂಲಕ ಫಿಟ್ನೆಸ್‌ ಕುರಿತು ದೇಶದ ಗಮನ ಸೆಳೆದಿದ್ದಾರೆ.

ಮನ್‌ಕಿ ಬಾತ್‌ ಕಾರ್ಯಕ್ರಮದಲ್ಲಿ ನನ್ನ ಫಿಟ್ನೆಸ್‌ಗೆ ಸಂಬಂಧಿಸಿದಂತೆ ಒಬ್ಬರು ಪ್ರಶ್ನೆ ಕೇಳಿದ್ದರು. ಇಂಥ ಸಮಯದಲ್ಲಿ ಫಿಟ್ನೆಸ್‌ ಕಾಪಾಡಿಕೊಳ್ಳುವ ಕುರಿತು ಕೇಳಿದ್ದರು, ಹಾಗಾಗಿ ಯೋಗಾಭ್ಯಾಸದ ವಿಡಿಯೊಗಳನ್ನು ಹಂಚಿಕೊಳ್ಳಲು ಯೋಚಿಸಿದೆ. ನೀವೂ ಯೋಗಾಭ್ಯಾಸ ಮಾಡುತ್ತಿರುವಿರೆಂದು ನಂಬಿದ್ದೇನೆ ಎಂದು ಪ್ರಧಾನಿ ಪ್ರಕಟಿಸಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಅಂತರರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಇಂಥದ್ದೇ ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಜನರನ್ನು ಯೋಗಾಭ್ಯಾಸದತ್ತ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT