ಯೋಗಿ ಆದಿತ್ಯನಾಥಗೆ ನಿಂದನೆ: ಬಂಧನ

7

ಯೋಗಿ ಆದಿತ್ಯನಾಥಗೆ ನಿಂದನೆ: ಬಂಧನ

Published:
Updated:

ನೊಯಿಡಾ (ಉ.ಪ್ರ): ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಹಾಗೂ ಹಿಂದು ಯುವ ವಾಹಿನಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದ ಉಮೇಶ್‌ ಅವರನ್ನು ಬಂಧಿಸಲಾಗಿದೆ.

ಹಿಂದು ಯುವ ವಾಹಿನಿಯ ವಲಯ ಅಧ್ಯಕ್ಷ ನವೀನ್ ಪಂಡಿತ್ ದೂರು ನೀಡಿದ ಕಾರಣ ಎಫ್‌ಐಆರ್ ದಾಖಲಾಗಿತ್ತು.

‘ದ್ರೋಣ’ ಉತ್ಸವದ ವೇಳೆ ನಡೆದ ಅಸಭ್ಯ ನೃತ್ಯ ಹಾಗೂ ಕವ್ವಾಲಿ ಕಾರ್ಯಕ್ರಮಗಳಿಗೆ ಪಂಡಿತ್‌ ಆಕ್ಷೇಪ  ವ್ಯಕ್ತಪಡಿಸಿದ್ದರು.

ಇದರಿಂದ ಕೆರಳಿದ ಉಮೇಶ್‌ ಅವರು ಪಂಡಿತ್‌ಗೆ ಕರೆ ಮಾಡಿ ನಿಂದಿಸಿದ್ದರಲ್ಲದೇ, ಮುಖ್ಯಮಂತ್ರಿ ಆದಿತ್ಯನಾಥ ಅವರನ್ನೂ ಅವಹೇಳನ ಮಾಡಿದ್ದರು. ಭಾನುವಾರ ರಾತ್ರಿ ಪಂಡಿತ್ ಮನೆಗೆ ತೆರಳಿದ್ದ ಉಮೇಶ್‌ ಪಿಸ್ತೂಲ್‌ ತೋರಿಸಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದೂ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !