ಕಾಂಗ್ರೆಸ್ 55 ವರ್ಷದಲ್ಲಿ ಮಾಡಿದ್ದನ್ನು ಬಿಜೆಪಿ ಐದೇ ವರ್ಷದಲ್ಲಿ ಮಾಡಿದೆ: ಯೋಗಿ

ಮಂಗಳವಾರ, ಏಪ್ರಿಲ್ 23, 2019
31 °C

ಕಾಂಗ್ರೆಸ್ 55 ವರ್ಷದಲ್ಲಿ ಮಾಡಿದ್ದನ್ನು ಬಿಜೆಪಿ ಐದೇ ವರ್ಷದಲ್ಲಿ ಮಾಡಿದೆ: ಯೋಗಿ

Published:
Updated:

ಲಖನೌ: ಕಾಂಗ್ರೆಸ್ ಸರ್ಕಾರ 55 ವರ್ಷಗಳಿಂದ ಮಾಡಿರುವ ಸಾಧನೆಗಳನ್ನು ನರೇಂದ್ರ ಮೋದಿ ಕೇವಲ ಐದು ವರ್ಷಗಳಲ್ಲಿ ಮಾಡಿ ಮುಗಿಸಿದ್ದಾರೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುಡುಗಿದ್ದಾರೆ.

ಇಲ್ಲಿನ ಶಹರಾನ್‌ಪುರ ಜಿಲ್ಲೆಯ ಬೆಹತ್ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ರ‌್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ರ‌್ಯಾಲಿಗೂ ಮುನ್ನ ಶಾಕಂಬರಿ ಪೀಠಕ್ಕೆ ನಮಸ್ಕರಿಸಿದರು. ವಂದೇಮಾತರಂ ಎಂದು ಹೇಳುವ ಮೂಲಕ ಮಾತು ಆರಂಭಿಸಿದ ಆದಿತ್ಯನಾಥ್, ನರೇಂದ್ರ ಮೋದಿ ಹೆಸರು ಇಡೀ ದೇಶದಲ್ಲಿ ಪ್ರತಿಧ್ವನಿಸುತ್ತಿದೆ. ವಿಶ್ವದ ಎಲ್ಲೆಡೆ ಭಾರತದ ಘನತೆಯನ್ನು ಎತ್ತಿಹಿಡಿಯುವಂತಹ ಕೆಲಸಗಳನ್ನು ಮೋದಿ ಮಾಡಿದ್ದಾರೆ ಅಲ್ಲದೆ, ಅವರ ಮುಂದಾಳತ್ವದಲ್ಲಿ ಭಾರತವನ್ನು ಒಂದು ಸದೃಢ ರಾಷ್ಟ್ರವನ್ನಾಗಿ ಮಾಡಿದ್ದಾರೆ ಎಂದರು. 

'ಸಮಾಜವಾದಿ ಪಕ್ಷವು ತನ್ನ ಆಡಳಿತದಲ್ಲಿ ಹಿಂದೂಗಳ ಎಲ್ಲಾ ಕಾರ್ಯಕ್ರಮಗಳನ್ನೂ ರದ್ದು ಮಾಡಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ 'ಕನ್ವರ್' ಯಾತ್ರೆಗಳನ್ನು ಯಾವುದೇ ಅಡೆತಡೆ ಇಲ್ಲದೆ ನಡೆಸಿದೆ. ಅಲ್ಲದೆ, ನಾವು ಪೊಲೀಸ್ ಇಲಾಖೆಗೆ ನೇಮಕ ಆರಂಭಿಸಿದೆವು ಮತ್ತು ಹೆಣ್ಣು ಮಕ್ಕಳಿಗೆ ಅವಕಾಶ ಕಲ್ಪಿಸಿದೆವು' ಎಂದು ವಾಗ್ದಾಳಿ ನಡೆಸಿದರು. 

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಬ್ಬನ್ನು ಮರದಲ್ಲಿ ಬೆಳೆಯುತ್ತಾರೆ ಎಂದು ನಂಬಿದ್ದಾರೆ ಎಂದು ಅಪಹಾಸ್ಯ ಮಾಡಿದರು. 

ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷಗಳ ವಿರುದ್ಧ ನೇರ ವಾಗ್ದಾಳಿ ನಡೆಸಿದ ಆದಿತ್ಯನಾಥ್, ಕಳೆದ 10 ವರ್ಷಗಳಲ್ಲಿ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಆಡಳಿತ ನಡೆಸಿದ್ದವು.ಆದರೆ, ಆ ಪಕ್ಷಗಳ ಮುಖ್ಯಮಂತ್ರಿಗಳಾರೂ ಇಲ್ಲಿಗೆ ಒಂದು ಬಾರಿಯೂ ಬರಲಿಲ್ಲ. ಆದರೆ, ನಾನು ಕಳೆದ ಎರಡು ವರ್ಷಗಳ ಅಧಿಕಾರವಧಿಯಲ್ಲಿ ಆರು ಬಾರಿ ಭೇಟಿ ನೀಡಿದ್ದೇನೆ ಎಂದರು.

 ಉತ್ತರ ಪ್ರದೇಶದ ಒಟ್ಟು 80 ಸ್ಥಾನಗಳಲ್ಲಿ 74 ಸ್ಥಾನಗಳನ್ನು ಗೆಲ್ಲಲೇಬೇಕಾದ ಗುರಿ ಹೊಂದಿದ್ದು, 'ಉತ್ತರಪ್ರದೇಶ್ 74 ಪರ್, ಫಿರ್ ಏಕ್ ಬಾರ್ ಮೋದಿ ಸರ್ಕಾರ್' ಎಂಬ ಘೋಷ ವಾಕ್ಯವನ್ನು ರ‌್ಯಾಲಿಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಪುನರುಚ್ಚರಿಸುವಂತೆ ಹೇಳಿದರು. 'ಮೋದಿ ಹೈ ತೋ, ಮುಮ್ಕಿನ್ ಹೈ'ಎಂಬ ಘೋಷವಾಕ್ಯವನ್ನೂ ಕೂಗುವಂತೆ ಕಾರ್ಯಕರ್ತರಿಗೆ ಹೇಳಿದರು. ಅಲ್ಲದೆ, ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದರೆ ಈ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ರಾಘವ್ ಲಖನ್‌ಪಾಲ್ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಿಜೆಪಿ ಈ ಕ್ಷೇತ್ರದಲ್ಲಿ ಹಾಲಿ ಸಂಸದ ರಾಘವ್ ಲಖನ್‌ಪಾಲ್ ಅವರನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿ ಫಜಲ್ ಉರ್ ರೆಹಮಾನ್, ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಹಾಗೂ ಬಿಜೆಪಿ ಅಭ್ಯರ್ಥಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !