ಯೋಗಿ ಆದಿತ್ಯನಾಥ್‌ ಪ್ರಚೋದನಕಾರಿ ಭಾಷಣ ಪ್ರಕರಣ: ಸರ್ಕಾರಕ್ಕೆ ಸುಪ್ರೀಂ ನೋಟಿಸ್‌

7

ಯೋಗಿ ಆದಿತ್ಯನಾಥ್‌ ಪ್ರಚೋದನಕಾರಿ ಭಾಷಣ ಪ್ರಕರಣ: ಸರ್ಕಾರಕ್ಕೆ ಸುಪ್ರೀಂ ನೋಟಿಸ್‌

Published:
Updated:

ನವದೆಹಲಿ: 2007ರಲ್ಲಿ ಸಂಸದರಾಗಿದ್ದ ಯೋಗಿ ಆದಿತ್ಯನಾಥ್‌ ಮಾಡಿದ ಪ್ರಚೋದನಾಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಈವರೆಗೂ ಯಾಕೆ ಕಾನೂನು ಕ್ರಮಗಳನ್ನು ಜರುಗಿಸಿಲ್ಲ ಎಂದು ಉತ್ತರ ಪ್ರದೇಶದ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ.

ನೋಟಿಸ್‌ಗೆ ನಾಲ್ಕು ವಾರಗಳ ಒಳಗೆ ಉತ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ದೇಶದ ಉನ್ನತ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರ ಒಳಗೊಂಡ ನ್ಯಾಯಪೀಠ ತಾಕೀತು ಮಾಡಿದೆ. 

ಗೋರಖಪುರದ ಸ್ಥಳೀಯ ಪತ್ರಕರ್ತ ಪರ್ವೇಜ್‌ ಪರ್ವಾಝ್ ಮತ್ತು ಕೋಮುಗಲಭೆಯೊಂದರ ಸಾಕ್ಷಿಯಾಗಿರುವ ಅಸದ್‌ ಹಯಾತ್‌  ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಈ ನೋಟಿಸ್‌ ನೀಡಿದೆ. 

‘ಉತ್ತರ ಪ್ರದೇಶದ ಈಗಿನ ಮುಖ್ಯಮಂತ್ರಿ ಅವರು ಆಡಿರುವ ಪ್ರಚೋದನಕಾರಿ ಮಾತುಗಳ ವಿಡಿಯೊ ಟೇಪ್‌ಗಳು ಹಾಗೂ ಸೂಕ್ತ ದಾಖಲೆಗಳು ನಮ್ಮಲ್ಲಿ ಇವೆ. ಹಾಗಾಗಿ ಅಲಹಾಬಾದ್‌ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದೇವೆ’ ಎಂದು ಅರ್ಜಿದಾರರು ತಿಳಿಸಿದ್ದಾರೆ.   

‘2007ರಲ್ಲಿ ಗೋರಖಪುರದಲ್ಲಿ ನಡೆದ ಕೋಮುಗಲಭೆಗಳಿಗೆ ಯೋಗಿ ಆದಿತ್ಯನಾಥ್‌ರ ಪ್ರಚೋದನಕಾರಿ ಭಾಷಣವೇ ಕಾರಣ, ಈ ಕುರಿತು ಸಿಬಿಐ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ಇದೇ ವರ್ಷದ ಫೆಬ್ರವರಿಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ವಜಾಗೊಳಿಸಿತ್ತು. 

‘ಈ ಪ್ರಕರಣದಲ್ಲಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸುವುದರಿಂದ ಯಾವುದೇ ನಿಯಮಗಳ ಉಲ್ಲಂಘನೆ ಆಗುವುದಿಲ್ಲ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. 

2007 ಜನವರಿ 27ರಂದು ಗೋರಖಪುರದ ಕೆಲವು ಪ್ರದೇಶಗಳಲ್ಲಿ ಕೋಮುಗಲಭೆಗಳು ನಡೆದಿದ್ದವು. ಅವುಗಳಲ್ಲಿ ಹತ್ತು ಜನರು ಮೃತಪಟ್ಟಿದ್ದರು. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !