ಅಧಿಕಾರದಲ್ಲಿದ್ದಾಗ ಯಾಕೆ ಬಡವರಿಗಾಗಿ ಕೆಲಸ ಮಾಡಲಿಲ್ಲ: ರಾಹುಲ್‌ಗೆ ಯೋಗಿ ಪ್ರಶ್ನೆ

ಶುಕ್ರವಾರ, ಏಪ್ರಿಲ್ 26, 2019
34 °C

ಅಧಿಕಾರದಲ್ಲಿದ್ದಾಗ ಯಾಕೆ ಬಡವರಿಗಾಗಿ ಕೆಲಸ ಮಾಡಲಿಲ್ಲ: ರಾಹುಲ್‌ಗೆ ಯೋಗಿ ಪ್ರಶ್ನೆ

Published:
Updated:

ವಾರಣಾಸಿ: ಅಧಿಕಾರಕ್ಕೆ ಬಂದರೆ ಕಡು ಬಡ ಕುಟುಂಬಗಳಿಗೆ ವಾರ್ಷಿಕ ₹ 72 ಸಾವಿರ ಕನಿಷ್ಠ ಆದಾಯ ನೀಡಲಾಗುವುದು ಎಂದು ಘೋಷಿಸಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಾಗ್ದಾಳಿ ನಡೆಸಿದರು. ತಾವು ಅಧಿಕಾರದಲ್ಲಿದ್ದಾಗ ಯಾಕೆ ಇಂತಹ ಯೋಜನೆಯನ್ನು ಜಾರಿಗೊಳಿಸಲಿಲ್ಲ ಎಂದು ಪ್ರಶ್ನಿಸಿದರು.

ಇಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಜನರಿಗೆ ವಾರ್ಷಿಕ ಕನಿಷ್ಠ ₹ 72ಸಾವಿರ ನೀಡುವುದಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಹೇಳುತ್ತಾರೆ. ನಾನು ಅವರನ್ನು ಕೇಳುತ್ತೇನೆ, ನೀವು 2004ರಿಂದ 2014ರ ವರೆಗೆ ಅಧಿಕಾರದಲ್ಲಿದ್ದಿರಿ. ಆ ಅವಧಿಯಲ್ಲಿ ಯಾಕೆ ನೀವು ಬಡವರಿಗಾಗಿ ಏನನ್ನೂ ಮಾಡಲಿಲ್ಲ’ ಎಂದು ಕೇಳಿದರು.‌

‘ಪ್ರಧಾನಮಂತ್ರಿ ಅವಾಸ್‌ ಯೋಜನೆ, ಸೌಭಾಗ್ಯ ಯೋಜನೆ, ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ, ಸ್ಟಾರ್ಟ್‌ಅಪ್‌ ಇಂಡಿಯಾ, ಆಯುಷ್ಮಾನ್‌ ಭಾರತ್‌, ಪ್ರಧಾನಮಂತ್ರಿ ಮುದ್ರಾ ಹಾಗೂ ಇನ್ನೂ ಮುಂತಾದವು. ಈ ಎಲ್ಲಾ ಯೋಜನೆಗಳು ಮೋದಿ ಜಿ ಪ್ರಧಾನಿ ಆದ ಬಳಿಕ ಜಾರಿ ಆದದ್ದು ಯಾಕೆ? ಈ ಎಲ್ಲ ಕೆಲಸಗಳನ್ನು ಮಾಡಲು ನಿಮಗೆ ಸಾಧ್ಯವಾಗಿಲ್ಲ ಏಕೆಂದರೆ ಕಾಂಗ್ರೆಸ್‌ಗೆ ಬಡವರ ಬಗ್ಗೆ ಸಂವೇದನೆ ಇಲ್ಲ’ ಎಂದು ಕಿಡಿಕಾರಿದರು.

ಇದನ್ನೂ ಓದಿ: ಬಡವರಿಗೆ ವಾರ್ಷಿಕ ₹72 ಸಾವಿರ; ರಾಹುಲ್‌ ಭರವಸೆ

ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಉಗ್ರರ ಶಿಬಿರಗಳ ಮೇಲೆ ನಡೆಸಿದ ದಾಳಿಯನ್ನು ಪ್ರಶ್ನಿಸಿದ ವಿರೋಧ ಪಕ್ಷಗಳ ವಿರುದ್ಧವೂ ಯೋಗಿ ಹರಿಹಾಯ್ದರು. ‘ಪಾಕಿಸ್ತಾನ ನಮ್ಮ ಯೋಧರ ಶಿರಚ್ಛೇದ ಮಾಡಿತ್ತು. ಅವರು(ಕಾಂಗ್ರೆಸ್‌ನವರು) ಏನನ್ನೂ ಮಾಡಲಿಲ್ಲ. ಪುಲ್ವಾಮಾ ದಾಳಿ ಬಳಿಕ ಪ್ರಧಾನಿ ಮೋದಿ ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದರು. ವಾಯುದಾಳಿಯಿಂದ ಉಗ್ರರ ನೆಲೆಗಳು ನಾಶವಾಗಿರುವುದನ್ನು ನೀವು ನೋಡಿದ್ದೀರಿ. ಪ್ರಧಾನಿ ಮೋದಿ ಏನು ಹೇಳಿದರೋ ಅದನ್ನು ಮಾಡಿದ್ದಾರೆ’ ಎಂದರು.

ಕಾಂಗ್ರೆಸ್‌ ಮಾತ್ರವಲ್ಲದೆ ಸಮಾಜವಾದಿ ಪಕ್ಷ(ಎಸ್‌ಪಿ), ಬಹುಜನ ಸಮಾಜವಾದಿ ಪಕ್ಷವನ್ನೂ(ಬಿಎಸ್‌ಪಿ) ಟೀಕಿಸಿದ ಯೋಗಿ, ‘ಅವರು ನೀಡುತ್ತಿರುವ ಹೇಳಿಕೆಗಳು ಪಾಕಿಸ್ತಾನವನ್ನು ಸಂತಸಗೊಳಿಸುತ್ತಿವೆ. ಈ ಚುನಾವಣೆಯು ಯಾರು ನಮ್ಮ ಸೇನಾ ಪಡೆಗಳನ್ನು ಅವಮಾನಿಸುತ್ತಿದ್ದಾರೆ ಹಾಗು ಭಯೋತ್ಪಾದನೆಯನ್ನು ಬೆಂಬಲಿಸುತ್ತಿದ್ದಾರೆ ಎಂಬುದನ್ನು ತೆರೆದಿಡುತ್ತಿದೆ’ ಎಂದು ಕುಟುಕಿದರು.

ಕಡು ಬಡ ಕುಟುಂಬಗಳಿಗೆ ವಾರ್ಷಿಕ ಕನಿಷ್ಠ ₹72ಸಾವಿರ ಆದಾಯ ನೀಡುವ ಯೋಜನೆಯನ್ನು ರಾಹುಲ್ ಗಾಂಧಿ ಸೋಮವಾರ ಘೋಷಿಸಿದ್ದರು. ಲೋಕಸಭಾ ಚುನಾವಣೆಯು ಏಪ್ರಿಲ್‌ 11ರಿಂದ ಮೇ 19ರ ವರೆಗೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ. ಯೋಗಿ ರಾಜ್ಯದಲ್ಲಿ(ಉತ್ತರಪ್ರದೇಶ) ಏಳು ಹಂತಗಳಲ್ಲಿಯೂ ಚುನಾವಣೆ ನಡೆಯಲಿದೆ. ಫಲಿತಾಂಶವು ಮೇ 23ರಂದು ಪ್ರಕಟವಾಗಲಿದೆ.

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !