ಅಮರನಾಥ ಯಾತ್ರಿಗಳನ್ನು ಸ್ವಾಗತಿಸಿದ ಹಿಜ್ಬುಲ್‌ ಮುಜಾಹಿದ್ದೀನ್‌!

7

ಅಮರನಾಥ ಯಾತ್ರಿಗಳನ್ನು ಸ್ವಾಗತಿಸಿದ ಹಿಜ್ಬುಲ್‌ ಮುಜಾಹಿದ್ದೀನ್‌!

Published:
Updated:
ಅಮರನಾಥ ಯಾತ್ರೆಗೆ ಹೊರಟಿರುವ ಯಾತ್ರಿಕರು

ಶ್ರೀನಗರ: ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸುವ ಯಾವುದೇ ಯೋಜನೆ ಇಲ್ಲ ಎಂದಿರುವ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆ, ಅಮರನಾಥ ಯಾತ್ರಿಗಳು ನಮ್ಮ ಅತಿಥಿಗಳು ಎಂದಿದೆ. 

ಕೆಲ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ 15 ನಿಮಿಷಗಳ ಆಡಿಯೊ ಕ್ಲಿಪ್‌ನಲ್ಲಿರುವ ಧ್ವನಿ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಯ ಕಮಾಂಡರ್‌ ರಿಯಾಜ್‌ ಅಹ್ಮದ್ ನಾಯ್ಕೊದು ಎನ್ನಲಾಗುತ್ತಿದೆ. ‘ಯಾವುದೇ ಭದ್ರತೆ ಇಲ್ಲದೆ ಭಕ್ತರು ಯಾತ್ರೆ ಪೂರೈಸಬಹುದು. ನೀವು ನಮ್ಮ ಅತಿಥಿಗಳು. ನಾವು ಯಾವತ್ತಿಗೂ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಿಲ್ಲ, ನಡೆಸುವುದಿಲ್ಲ. ಧಾರ್ಮಿಕ ಇಷ್ಟಾರ್ಥದ ಪೂರೈಕೆಗೆ ಬರುವ ಯಾತ್ರಿಗಳ ವಿರುದ್ಧ ನಮ್ಮ ಹೋರಾಟವಲ್ಲ’ ಎಂಬ ಸಂದೇಶವಿದೆ. 

ದಕ್ಷಿಣ ಕಾಶ್ಮೀರದಲ್ಲಿರುವ ರಿಯಾಜ್‌ ಅಹ್ಮದ್‌ ಭದ್ರತಾ ಪಡೆಯ ವಾಂಟೆಡ್‌ ಪಟ್ಟಿಯಲ್ಲಿರುವ ಪ್ರಮುಖ. 

ಕಳೆದ ವರ್ಷ ಅನಂತ್‌ನಾಗ್‌ನಲ್ಲಿ ಬಸ್‌ ಮೇಲೆ ಉಗ್ರರರು ನಡೆಸಿದ ದಾಳಿಯಲ್ಲಿ 8 ಮಂದಿ ಅಮರನಾಥ ಯಾತ್ರಿಕರು ಸಾವಿಗೀಡಾಗಿದ್ದರು. 

ಅಮರನಾಥ ಯಾತ್ರೆಗೆ ಈವರೆಗೆ ದೇಶದಾದ್ಯಂತ 2 ಲಕ್ಷ ಯಾತ್ರಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 

 

 

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !