ಬಿಹಾರದಲ್ಲಿ ಜಿಕಾ ವೈರಸ್‌ ಸೋಂಕು: 38 ಜಿಲ್ಲೆಗಳಿಗೆ ಎಚ್ಚರಿಕೆ

7

ಬಿಹಾರದಲ್ಲಿ ಜಿಕಾ ವೈರಸ್‌ ಸೋಂಕು: 38 ಜಿಲ್ಲೆಗಳಿಗೆ ಎಚ್ಚರಿಕೆ

Published:
Updated:

ಪಟನಾ: ಬಿಹಾರದ ಸಿವಾನ್‌ನಲ್ಲಿ ವಿದ್ಯಾರ್ಥಿಯೊಬ್ಬನಿಗೆ ಜಿಕಾ ಸೋಂಕು ತಗುಲಿರುವುದು ಪರೀಕ್ಷೆಗಳಿಂದ ಪತ್ತೆಯಾಗಿದೆ. ಬಿಹಾರ ಸರ್ಕಾರ ರಾಜ್ಯದ 38 ಜಿಲ್ಲೆಗಳಿಗೆ ಜಿಕಾ ಎಚ್ಚರಿಕೆ ರವಾನಿಸಿದೆ. 

ಜೈಪುರದಲ್ಲಿ ಕಂಪ್ಯೂಟರ್‌ ಸೈನ್ಸ್‌ ವ್ಯಾಸಂಗ ಮಾಡುತ್ತಿರುವ ಪಂಕಜ್‌ ಚೌರಾಸಿಯ(22) ಪರೀಕ್ಷೆಗೆ ಹಾಜರಾಗಲು ಆಗಸ್ಟ್‌ 28ರಿಂದ ಸೆಪ್ಟೆಂಬರ್‌ 12ರ ವರೆಗೂ ಸಿವಾನ್‌ನಲ್ಲಿದ್ದರು. ಇದೇ ಸಮಯದಲ್ಲಿ ಪಂಕಜ್‌ಗೆ ಜಿಕಾ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಬಿಹಾರಕ್ಕೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬರಲ್ಲಿ ಜಿಕಾ ಸೋಂಕು ತಗುಲಿರುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೇಂದ್ರ ವಿಚಕ್ಷಣ ಘಟಕ ಸೂಚನೆ ನೀಡಿರುವುದಾಗಿ ಬಿಹಾರ ರಾಹ್ತ ಆರೋಗ್ಯ ಸೊಸೈಟಿಯ ವೈದ್ಯ ಡಾ.ರಾಗಿಣಿ ಮಿಶ್ರಾ ತಿಳಿಸಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. 

ಎಚ್ಚರಿಕೆ ಸಂದೇಶ ರವಾನೆಯಾಗುತ್ತಿದ್ದಂತೆ ಪಂಕಜ್‌ ವಾಸ್ತವ್ಯ ಹೂಡಿದ್ದ ಸಿವಾನ್‌ನ ಹರಿಯಾರ್‌ಪುರ ಗ್ರಾಮದಲ್ಲಿನ ಮನೆಯ ಕುಟುಂಬದ ಎಂಟು ಸದಸ್ಯರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಕುಟುಂಬದ ಯಾವ ಸದಸ್ಯರಲ್ಲೂ ಜಿಕಾ ಸೋಂಕು ಪತ್ತೆಯಾಗಿಲ್ಲ. ಆದರೆ, ಕುಟುಂಬದಲ್ಲಿ ಗರ್ಭಿಣಿಯೊಬ್ಬರು ಇರುವುದರಿಂದ ಅವರ ಆರೋಗ್ಯದ ಮೇಲೆ ಮುಂದಿನ 26 ದಿನಗಳ ವರೆಗೆ ನಿಗಾವಹಿಸುವುದಾಗಿ ಡಾ.ಮಿಶ್ರಾ ತಿಳಿಸಿದ್ದಾರೆ. 

13 ದಿನಗಳಲ್ಲಿ ಜಿಕಾ ಪತ್ತೆಯಾಗುತ್ತದೆ. ಯುವಕ ಸೆಪ್ಟೆಂಬರ್‌ 12ರಂದೇ ಬಿಹಾರದಿಂದ ಹೊರಟಿದ್ದಾರೆ. ಹಾಗಾಗಿ, ಬಿಹಾರದಲ್ಲಿ ಆತನಿಗೆ ಜಿಕಾ ಸೋಂಕು ತಗುಲಿರುವ ಸಾಧ್ಯತೆ ಕಡಿಮೆ. ಆದರೆ, ಸಿವಾನ್‌ನಲ್ಲಿ ಡೆಂಗಿ ಹರಡಿದ್ದು, ರೋಗ ಹರಡುತ್ತಿರುವ ಆ್ಯಡಿಸ್‌ ಏಜಿಪ್ಟಿ ಸೊಳ್ಳೆಯಿಂದ ಜಿಕಾ ಕೂಡ ಹರಡುವ ಸಾಧ್ಯತೆಯಿದೆ. ಹಾಗಾಗಿ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಅವರು ಅಭಿಪ್ರಾಯ ಪಟ್ಟರು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !