ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ನಲ್ಲಿ ಕನ್ನಡಿಗರ ಆಟ

ಒಂದೇ ದಿನ ಮಿಂಚಿದ ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್‌, ಪ್ರಸಿದ್ಧ ಕೃಷ್ಣ
Last Updated 20 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶನಿವಾರ ರಾತ್ರಿ ಇಬ್ಬರು ಕನ್ನಡಿಗರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಅಂಗಳದಲ್ಲಿ ಮಿಂಚಿದರು.

ರಾಜಸ್ಥಾನ್ ರಾಯಲ್ಸ್‌ ತಂಡದಲ್ಲಿರುವ ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ (16ಕ್ಕೆ4) ಮತ್ತು ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ಮಧ್ಯಮವೇಗಿ ಪ್ರಸಿದ್ಧ ಎಂ ಕೃಷ್ಣ (30ಕ್ಕೆ4) ಅವರೇ ಆ ಆಟಗಾರರು.

ಟೂರ್ನಿಯಲ್ಲಿ ತಮ್ಮ ತಂಡಗಳು ಪ್ಲೇ ಆಫ್‌ ಹಂತ ಪ್ರವೇಶಿಸಲು ಅಗತ್ಯವಿದ್ದ ಜಯವನ್ನು ಗಳಿಸಿಕೊಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಶ್ರೇಯಸ್ ಸ್ಪಿನ್ ಮೋಡಿಗೆ ರಾಯಲ್ ಚಾಲೆಂಜರ್ಸ್‌ ಬೆಂಗ ಳೂರು ತಂಡವು ಟೂರ್ನಿಯಿಂದ ಹೊರಬಿದ್ದಿತು.

ಪ್ರಸಿದ್ಧ ಆಟಕ್ಕೆ ಸನ್‌ರೈಸರ್ಸ್‌ ತಂಡವು ಸೋಲ ನುಭವಿಸಿತು. ಕರ್ನಾಟಕದ ಕ್ರಿಕೆಟ್‌ಪ್ರೇಮಿಗಳು ಕನ್ನಡಿಗರಿಬ್ಬರ ಸಾಧನೆಯನ್ನು ಕಣ್ತುಂಬಿಕೊಂಡು, ಆರ್‌ಸಿಬಿ ಸೋತ ದುಃಖವನ್ನು ಶಮನಗೊಳಿಸಿಕೊಳ್ಳಲು ಯತ್ನಿಸಿದ್ದಾರೆ.  ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಈ ಟೂರ್ನಿಯಲ್ಲಿ ಬೇರೆ ಬೇರೆ ತಂಡಗಳಲ್ಲಿ ಆಡುತ್ತಿರುವ  ಕನ್ನಡಿಗರು ತಮಗೆ ಸಿಕ್ಕ ಅವಕಾಶಗಳಲ್ಲಿ ಮಿಂಚಿದ್ದಾರೆ.

ಆರ್‌ಸಿಬಿಯಲ್ಲಿ ಇಬ್ಬರು ಕನ್ನಡಿಗರು ಇದ್ದರೂ ಅವರಿಗೆ ಟೂರ್ನಿಯಲ್ಲಿ ಕಣಕ್ಕಿಳಿಯುವ ಅವಕಾಶವೇ ಸಿಗಲಿಲ್ಲ. ಹರಾಜು ಪ್ರಕ್ರಿಯೆಯಲ್ಲಿಯೂ ಆರ್‌ಸಿಬಿಯು ಕರ್ನಾಟಕದ ಆಟಗಾರರ ಆಯ್ಕೆಗೆ ಆದ್ಯತೆ ನೀಡಲಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಪಿಎಲ್ 11ನೇ ಆವೃತ್ತಿಯ ಲೀಗ್ ಹಂತವು ಭಾನುವಾರ ಮುಕ್ತಾಯ ವಾಯಿತು. ಇದರಲ್ಲಿ ಕರ್ನಾಟಕದ ಆಯ್ದ 10 ಆಟಗಾರರ  ಸಾಧನೆಯ ನೋಟ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT