ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಕೊಡಲಿಲ್ಲವೆಂದು 2 ಮತ್ತು 4 ವರ್ಷದ ಪುಟ್ಟ ಮಕ್ಕಳೀಗ 102-104 ವರ್ಷದವರು! 

Last Updated 22 ಜನವರಿ 2020, 6:48 IST
ಅಕ್ಷರ ಗಾತ್ರ

ಬರೇಲಿ: ಜನನವನ್ನು ದೃಢೀಕರಿಸುವ ಜನನ ಪ್ರಮಾಣ ಪತ್ರದಲ್ಲಿಯೇ ಅಧಿಕಾರಿಗಳ ತಪ್ಪಿನಿಂದಾಗಿ ಉತ್ತರ ಪ್ರದೇಶದ ಎರಡು ವರ್ಷದ ಸಂಕೇತ್ ಮತ್ತು ನಾಲ್ಕು ವರ್ಷದ ಶುಭ್ ಎಂಬ ಮಕ್ಕಳ ವಯಸ್ಸು ಕ್ರಮವಾಗಿ 102 ಮತ್ತು 104 ಎಂದು ನಮೂದಾಗಿದೆ.

ಪೋಷಕರು ಹಣ ನೀಡಿಲ್ಲವೆಂಬ ಕಾರಣವನ್ನಿಟ್ಟುಕೊಂಡ ಅಧಿಕಾರಿಗಳು ಪುಟ್ಟ ಮಕ್ಕಳ ವಯಸ್ಸನ್ನು ಮನುಷ್ಯನ ಜೀವಿತಾವಧಿಗಿಂತಲೂ ಜಾಸ್ತಿಯಾಗಿ ನಮೂದಿಸಿದ್ದಾರೆ.

ಮಕ್ಕಳ ಕುಟುಂಬಸ್ಥರು ಹಣ ನೀಡಲು ನಿರಾಕರಿಸಿದ್ದಕ್ಕಾಗಿ ತಪ್ಪು ಜನನ ಪ್ರಮಾಣ ಪತ್ರ ನೀಡಿದ ಗ್ರಾಮಾಭಿವೃದ್ಧಿ ಅಧಿಕಾರಿ ಮತ್ತು ಗ್ರಾಮದ ಮುಖ್ಯಸ್ಥನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಬರೇಲಿಯ ನ್ಯಾಯಾಲಯ ಕಳೆದ ವಾರ ಪೊಲೀಸರಿಗೆ ಆದೇಶಿಸಿದೆ.

ಮಕ್ಕಳ ಅಂಕಲ್ ಪವನ್ ಕುಮಾರ್, ತನ್ನ ಸೋದರಳಿಯಂದಿರಾದ ಶುಭ್ ಮತ್ತು ಸಂಕೇತ್ ಜನನ ಪ್ರಮಾಣ ಪತ್ರದಲ್ಲಿ ಹುಟ್ಟಿದ ವರ್ಷವನ್ನು ತಪ್ಪಾಗಿ ನೀಡಲಾಗಿದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂದು ಪೊಲೀಸ್ ಅಧಿಕಾರಿ ತೇಜ್‌ಪಾಲ್ ಸಿಂಗ್ ತಿಳಿಸಿದ್ದಾರೆ.

ಎರಡು ತಿಂಗಳ ಹಿಂದಷ್ಟೇ ಪವನ್ ಕುಮಾರ್ ಜನನ ಪ್ರಮಾಣ ಪತ್ರಗಳಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಗ್ರಾಮ ಅಭಿವೃದ್ಧಿ ಅಧಿಕಾರಿ ಸುಶೀಲ್ ಚಂದ್ ಅಗ್ನಿಹೋತ್ರಿ ಮತ್ತು ಮುಖ್ಯಸ್ಥ ಪ್ರವೀಣ್ ಮಿಶ್ರಾ ಅವರು ಜನನ ಪ್ರಮಾಣ ಪತ್ರ ನೀಡಲು ತಲಾ ₹500 ಗಳನ್ನು ಬೇಡಿಕೆಯಿಟ್ಟಿದ್ದರು. ಲಂಚ ಕೊಡಲು ನಿರಾಕರಿಸಿದಾಗ 2016 ಮತ್ತು 2018ರ ಬದಲು ಜೂನ್ 13, 1916 ಮತ್ತು ಜನವರಿ 6, 1918 ಎಂದು ಪತ್ರದಲ್ಲಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಲಯವು ಜನವರಿ 17ರಂದು ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದು, ವಿಚಾರಣೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT