ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣಾಳಿಕೆಯಿಂದ ಶೇ 4ರಷ್ಟು ಹೆಚ್ಚು ಮತ

ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್‌ ಪರವಾಗಿ ಮತಯಾಚಿಸಿದ ಯಡಿಯೂರಪ್ಪ ಅಭಿಮತ
Last Updated 29 ಏಪ್ರಿಲ್ 2018, 10:59 IST
ಅಕ್ಷರ ಗಾತ್ರ

ಗದಗ: ‘ಏ.30ರಂದು ಬಿಜೆಪಿ ಚುನಾವಣೆ ಪ್ರಣಾಳಿಕೆ ಬಿಡುಗಡೆಯಾಗಲಿದ್ದು, ಈ ಪ್ರಣಾಳಿಕೆಯಿಂದ ಶೇ3ರಿಂದ ಶೇ4ರಷ್ಟು
ಹೆಚ್ಚುವರಿ ಮತಗಳು ಬಿಜೆಪಿಗೆ ಲಭಿಸಲಿವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ಇಲ್ಲಿನ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಗದಗ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಅವರ ಪರವಾಗಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ‘ಬಿಜೆಪಿ ಪ್ರಣಾಳಿಕೆಯಲ್ಲಿ ನೇಕಾರರ, ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಪ್ರಸ್ತಾಪ ಇರಲಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಆಲಮಟ್ಟಿ ಜಲಾಶಯದ ಎತ್ತರವನ್ನು 5 ಮೀ. ಹೆಚ್ಚಿಸಿ, ನೀರಾವರಿಗೆ ₹ 1 ಲಕ್ಷ ಕೋಟಿ ಅನುದಾನ ಮೀಸಲಿಡಲಾಗುವುದು. ಭಾಗ್ಯಲಕ್ಷ್ಮೀ ಯೋಜನೆಯಡಿ ಅನುದಾನ ಏರಿಕೆ ಮಾಡಲಾಗುವುದು. ಸಿದ್ದರಾಮಯ್ಯ ಅವರ ಹರಿಕತೆ ಬಯಲು ಮಾಡಲಾಗುವುದು’ ಎಂದರು.

‘ಗದಗ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಅವರನ್ನು ಗೆಲ್ಲಿಸುವ ಮೂಲಕ, ಈ ಕ್ಷೇತ್ರದಲ್ಲಿ ಗೆಲುವಿನ ಭ್ರಮೆಯಲ್ಲಿರುವ ಅಭ್ಯರ್ಥಿಗೆ, ಜನರು ಸೋಲಿನ ರುಚಿ ತೋರಿಸಲಿದ್ದಾರೆ’ ಎಂದರು.

ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಬಸವರಾಜ ಬೊಮ್ಮಾಯಿ, ಮೋಹನ ಲಿಂಬಿಕಾಯಿ, ಪ್ರಭಣ್ಣ ಹುಣಶಿಕಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ, ರಾಜು ಕುರಡಗಿ, ಭದ್ರೇಶ ಕುಸ್ಲಾಪುರ, ಎಂ.ಎಂ.ಹಿರೇಮಠ, ರವಿ ದಂಡಿನ, ಶ್ರೀಕಾಂತ ಖಟವಟೆ, ಕಾಂತಿಲಾಲ್ ಬನ್ಸಾಲಿ ಇದ್ದರು.

ಬಿದರೂರ ಮನವೊಲಿಕೆ

ಗದಗ ಕ್ಷೇತ್ರದಿಂದ ಬಿಜೆಪಿ ಟಿಕಟ್‌ ಸಿಗದ ಕಾರಣ ಮುನಿಸಿಕೊಂಡಿದ್ದ ಶ್ರೀಶೈಲಪ್ಪ ಬಿದರೂರ ಅವರ ನಿವಾಸಕ್ಕೆ, ಯಡಿಯೂರಪ್ಪ ಭೇಟಿ ನೀಡಿ ಅವರ ಮನವೊಲಿಕೆ ಮಾಡಿದರು. ಬಳಿಕ ಅವರನ್ನು ಜತೆಗೆ ಕರೆದುಕೊಂಡು, ಪ್ರಚಾರ ಸಭೆ ನಡೆಯುತ್ತಿದ್ದ ವಿವೇಕಾನಂದ ಸಭಾಭವನಕ್ಕೆ ಬಂದರು.

ಗದಗ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಹೆಲಿಪ್ಯಾಡ್‌ನಲ್ಲಿ ಯಡಿಯೂರಪ್ಪ ಅವರನ್ನು ಗದಗ ಕ್ಷೇತ್ರದ ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿ ಬರಮಾಡಿಕೊಂಡರು. ಬಳಿಕ ಅವರೇ ಯಡಿಯೂರಪ್ಪ ಅವರು ಕುಳಿತಿದ್ದ ಕಾರು ಚಲಾಯಿಸಿಕೊಂಡು, ಬಿದರೂರ ಅವರ ಮನೆಗೆ ಬಂದರು. ಬಳಿಕ ಅಲ್ಲಿಂದ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಬಂದರು.

‘ಯಡಿಯೂರಪ್ಪ ಮುಖ್ಯಮಂತ್ರಿ ಮತ್ತು ಬಿದರೂರ ಶಾಸಕರಾಗಿದ್ದಾಗ ಗದಗ ನಗರದ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ ಶಾಶ್ವತ ಯೋಜನೆ ರೂಪಿಸಿ, ಅದಕ್ಕೆ ಹೆಚ್ಚು ಅನುದಾನ ನೀಡಿದ್ದರು. ಕಾಂಗ್ರೆಸ್ ಏನೇ ತಂತ್ರ ರೂಪಿದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದನ್ನು ತಡೆಯಲು ಆಗುವುದಿಲ್ಲ. ಈ ಕ್ಷೇತ್ರದಲ್ಲಿ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲುವು ಲಭಿಸಲಿದೆ’ ಎಂದು ಅನಿಲ್‌ ಮೆಣಸಿನಕಾಯಿ ಹೇಳಿದರು.

ಬಿದರೂರ ಮನವೊಲಿಕೆ

ಗದಗ ಕ್ಷೇತ್ರದಿಂದ ಬಿಜೆಪಿ ಟಿಕಟ್‌ ಸಿಗದ ಕಾರಣ ಮುನಿಸಿಕೊಂಡಿದ್ದ ಶ್ರೀಶೈಲಪ್ಪ ಬಿದರೂರ ಅವರ ನಿವಾಸಕ್ಕೆ, ಯಡಿಯೂರಪ್ಪ ಭೇಟಿ ನೀಡಿ ಅವರ ಮನವೊಲಿಕೆ ಮಾಡಿದರು. ಬಳಿಕ ಅವರನ್ನು ಜತೆಗೆ ಕರೆದುಕೊಂಡು, ಪ್ರಚಾರ ಸಭೆ ನಡೆಯುತ್ತಿದ್ದ ವಿವೇಕಾನಂದ ಸಭಾಭವನಕ್ಕೆ ಬಂದರು.

ಗದಗ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಹೆಲಿಪ್ಯಾಡ್‌ನಲ್ಲಿ ಯಡಿಯೂರಪ್ಪ ಅವರನ್ನು ಗದಗ ಕ್ಷೇತ್ರದ ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿ ಬರಮಾಡಿಕೊಂಡರು. ಬಳಿಕ ಅವರೇ ಯಡಿಯೂರಪ್ಪ ಅವರು ಕುಳಿತಿದ್ದ ಕಾರು ಚಲಾಯಿಸಿಕೊಂಡು, ಬಿದರೂರ ಅವರ ಮನೆಗೆ ಬಂದರು. ಬಳಿಕ ಅಲ್ಲಿಂದ ಪ್ರಚಾರ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಬಂದರು.

‘ಯಡಿಯೂರಪ್ಪ ಮುಖ್ಯಮಂತ್ರಿ ಮತ್ತು ಬಿದರೂರ ಶಾಸಕರಾಗಿದ್ದಾಗ ಗದಗ ನಗರದ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ ಶಾಶ್ವತ ಯೋಜನೆ ರೂಪಿಸಿ, ಅದಕ್ಕೆ ಹೆಚ್ಚು ಅನುದಾನ ನೀಡಿದ್ದರು. ಕಾಂಗ್ರೆಸ್ ಏನೇ ತಂತ್ರ ರೂಪಿದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದನ್ನು ತಡೆಯಲು ಆಗುವುದಿಲ್ಲ. ಈ ಕ್ಷೇತ್ರದಲ್ಲಿ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲುವು ಲಭಿಸಲಿದೆ’ ಎಂದು ಅನಿಲ್‌ ಮೆಣಸಿನಕಾಯಿ ಹೇಳಿದರು.

ಹೆಲಿಕಾಪ್ಟರ್ ಇಳಿಯುವಾಗ ಗೊಂದಲ

ಯಡಿಯೂರಪ್ಪ ಅವರು ಬಂದಿದ್ದ ಹೆಲಿಕಾಪ್ಟರ್‌ ಗದಗ ಹೆಲಿಪ್ಯಾಡ್‌ನಲ್ಲಿ ಇಳಿಯುವಾಗ, ನಿಗದಿಪಡಿಸಿದ್ದ ಸ್ಥಳ ಬಿಟ್ಟು ಪಕ್ಕದ ಹೆಲಿಪ್ಯಾಡ್‌ನಲ್ಲಿ ಇಳಿಯಿತು. ಇದರಿಂದ ತುಸು ಗೊಂದಲ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT