ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿ.ಎಸ್.ನೈಪಾಲ್ ನಿಧನ

7

ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿ.ಎಸ್.ನೈಪಾಲ್ ನಿಧನ

Published:
Updated:

ಲಂಡನ್: ನೊಬೆಲ್ ಪ್ರಶಸ್ತಿ ಪುರಸ್ಕೃತ ಬ್ರಿಟಿಷ್ ಸಾಹಿತಿ ವಿ.ಎಸ್.ನೈಪಾಲ್ (85) ಶನಿವಾರ ನಿಧನರಾದರು.

ವಿ.ಎಸ್.ನೈಪಾಲ್ ಅವರ ಪೂರ್ಣ ಹೆಸರು ವಿದ್ಯಾಧರ್ ಸೂರಜ್‌ಪ್ರಸಾದ್ ನೈಪಾಲ್. ಟ್ರಿನಿಡಾಡ್‌ನಲ್ಲಿ 17ನೇ ಆಗಸ್ಟ್ 1932ರಲ್ಲಿ ಜನಿಸಿದರು. ಅವರ ತಂದೆ ಭಾರತ ಸರ್ಕಾರದ ಸೇವೆಯಲ್ಲಿದ್ದರು. ಆಕ್ಸ್‌ಫರ್ಡ್‌ ವಿವಿಯಲ್ಲಿ ವಿದ್ಯಾರ್ಥಿ ವೇತನ ಪಡೆದು ಇಂಗ್ಲಿಷ್ ಸಾಹಿತ್ಯ ಅಭ್ಯಾಸ ಮಾಡಿದರು.

ಇಂಗ್ಲೆಂಡ್‌ನಲ್ಲಿ ನೆಲೆಸಿದ್ದರೂ ಜೀವನದ ಬಹುಕಾಲವನ್ನು ಪ್ರವಾಸದಲ್ಲಿಯೇ ಕಳೆದರು. ಬ್ರಿಟನ್‌ನ ಸಾಂಸ್ಕೃತಿಕ ಜಗತ್ತಿನ ಆಧಾರ ಸ್ತಂಭವಾಗಿದ್ದ ಅವರು ‘ಬೇರಿಲ್ಲದ ಬದುಕು’ ಪರಿಕಲ್ಪನೆಯ ಸಂಕೇತದಂತೆ ತಮ್ಮ ಬದುಕು ಸಾಗಿಸಿದರು.
ನೈಪಾಲ್ ಅವರ ಆರಂಭದ ಕೃತಿಗಳು ವೆಸ್ಟ್‌ ಇಂಡೀಸ್‌ ಬದುಕನ್ನು ಹೆಚ್ಚು ಕೇಂದ್ರೀಕರಿಸಿದ್ದವು. ವಸಾಹತು ಕಾಲಘಟ್ಟದ ನಂತರ ವಿಶ್ವದ ವಿವಿಧ ದೇಶಗಳಲ್ಲಿ ಆದ ಬದಲಾವಣೆಗಳನ್ನು ಅವರ ಕೃತಿಗಳು ಹಿಡಿದಿಟ್ಟಿವೆ.

2001ರಲ್ಲಿ ಅವರಿಗೆ ಸಾಹಿತ್ಯದ ಸಾಧನೆಗಾಗಿ ನೊಬೆಲ್ ಪುರಸ್ಕಾರ ಸಂದಿತ್ತು. ‘ಜಗತ್ತು ಸುತ್ತುವ ಈ ಪಯಣಿಗ ಮನೆಯಲ್ಲಿರುವುದೇ ಅಪರೂಪ. ಸಾಹಿತ್ಯ ಕೃತಿಗಳಲ್ಲಿನ ಅವರ ದನಿ ಅನುಕರಣೀಯ’ ಎಂದು ನೊಬೆಲ್ ಪ್ರಶಸ್ತಿ ನೀಡುವ ಸ್ವೀಡಿಷ್ ಅಕಾಡೆಮಿ ಬಣ್ಣಿಸಿತ್ತು.

‘ತಮ್ಮನ್ನು ಪ್ರೀತಿಸುವವರು ಸುತ್ತುವರಿದಿದ್ದಾಗಲೇ ಅವರ ಕಣ್ಮುಚ್ಚಿದರು. ಇಷ್ಟಪಟ್ಟ ಕ್ಷೇತ್ರಗಳಲ್ಲಿ ದೈತ್ಯ ಸಾಧನೆ ಮಾಡಿದ ಅವರು ಸೃಜನಶೀಲತೆ ಮತ್ತು ಚಲನಶೀಲತೆ ಇದ್ದ ಸೊಗಸಾದ ಬದುಕನ್ನು ಸಾಗಿಸಿದ್ದರು’ ಎಂದು ಅವರ ಪತ್ನಿ ನಾದಿರಾ ನೈಪಾಲ್ ಪತಿಯ ಸಾವಿನ ಸುದ್ದಿ ತಿಳಿಸುವ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !