ಪೊಲೀಸ್ ಮೇಲೆ ಹಲ್ಲೆ: ಒಬ್ಬ ಬಂಧನ

7

ಪೊಲೀಸ್ ಮೇಲೆ ಹಲ್ಲೆ: ಒಬ್ಬ ಬಂಧನ

Published:
Updated:

ಕೋಲಾರ: ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಠಾಣೆಯ ಪೇದೆ ನಾಗರಾಜ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ನಗರದ ಕಾರಂಜಿಕಟ್ಟೆ ಬಡಾವಣೆಯ ವಿಶ್ವನಾಥ್‌ನನ್ನು ನಗರಠಾಣೆ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

ಪೇದೆ ನಾಗರಾಜ್ ನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ವಿಶ್ವಾನಾಥ್‌ ಮತ್ತು ಇಬ್ಬರು ಸ್ಹೇಹಿತರು ಪಾನಪತ್ತರಾಗಿ ಬೈಕ್‌ನಲ್ಲಿ ಅತಿ ವೇಗವಾಗಿ ಬರುತ್ತಿದ್ದರು. ಅವರನ್ನು ನಿಲ್ಲಿಸಿ ಯಾಕೆ ಇಷ್ಟೊಂದು ವೇಗವಾಗಿ ಬರುತ್ತಿದ್ದೀರ ಎಂದು ನಾಗರಾಜ್ ಪ್ರಶ್ನಿಸಿದರು.

ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ವಿಶ್ವಾನಾಥ್ ಪೇದೆ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ನಗರಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ವಿಶ್ವನಾಥ್‌ನನ್ನು ಬೈಕ್ ಸಮೇತ ವಶಕ್ಕೆ ಪಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !