ಸಂವಿಧಾನ ಸುಟ್ಟ ಕೃತ್ಯ ಖಂಡಿಸಿ ಪ್ರತಿಭಟನೆ

7

ಸಂವಿಧಾನ ಸುಟ್ಟ ಕೃತ್ಯ ಖಂಡಿಸಿ ಪ್ರತಿಭಟನೆ

Published:
Updated:
Deccan Herald

ಬೆಂಗಳೂರು: ಸಂವಿಧಾನದ ಪ್ರತಿ ಸುಟ್ಟ ಆರಕ್ಷಣ ವಿರೋಧಿ ಪಾರ್ಟಿ ಹಾಗೂ ಯೂತ್‌ ಇಕ್ವಾಲಿಟಿ ಫೌಂಡೇಷನ್ ಸಂಘಟನೆಗಳನ್ನು ನಿಷೇಧಿಸಬೇಕು ಮತ್ತು ಈ ಸಂಘಟನೆಗಳ ಮುಖಂಡರಾದ ದೀಪಕ್ ಗೌರ್ ಮತ್ತು ಅಭಿಷೇಕ್ ಶುಕ್ಲಾ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ‘ಲಾಯರ್ಸ್ ಫೋರಂ ಫಾರ್ ಜಸ್ಟೀಸ್ ವಕೀಲರು’ (ಸದಸ್ಯರು) ಹೈಕೋರ್ಟ್ ಮುಂಭಾಗ ಪ್ರತಿಭಟನೆ ಮಾಡಿದರು.

ವಕೀಲ ಪ್ರೊ. ರವಿವರ್ಮ ಕುಮಾರ್, ‘ನವದೆಹಲಿಯ ಜಂತರ್ ಮಂತರ್ ಬಳಿ ಸಂವಿಧಾನದ ಪ್ರತಿಯನ್ನು ಸುಟ್ಟ ಎರಡು ಸಂಘಟನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕುಮ್ಮಕ್ಕಿದೆ. ಆದ್ದರಿಂದ ಈ ಕುರಿತು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಸಂವಿಧಾನದ ನೆರಳಿನಲ್ಲಿ ಬದುಕುತ್ತಿರುವ ನಾವೆಲ್ಲರೂ ಅದರ ಆಶಯಗಳಿಗೆ ತಕ್ಕಂತೆ ನಡೆಯಬೇಕು. ಆದರೆ, ಇಂದು ಇದಕ್ಕೆ ವಿರುದ್ಧವಾಗಿ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾರ್ವಜನಿಕವಾಗಿ ರಸ್ತೆಯ ಮೇಲೆ ನಡೆದಾಡಲೂ ಆಗದಂತಹ ವಾತಾವರಣದಲ್ಲಿ ಬದುಕುತ್ತಿದ್ದೇವೆ. ವೆಂಕ, ನಾಣಿ ಸೀನನಂತಹ ಜನರೆಲ್ಲಾ ಕಾನೂನು ಕೈಗೆ ತೆಗೆದುಕೊಂಡು ದೇಶದಲ್ಲಿ ಭೀಕರ ವಾತಾವರಣ ಸೃಷ್ಟಿಸಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸದ ರಾಜ್ಯಪಾಲರು

ಇದೇ ವೇಳೆ ಹೈಕೋರ್ಟ್‌ ಮುಂಭಾಗದಿಂದ ರಾಜಭವನಕ್ಕೆ ಪ್ರತಿಭಟನಾ ಜಾಥಾದೊಂದಿಗೆ ವಕೀಲರು ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಆದರೆ, ರಾಜ್ಯಪಾಲರು ಮನವಿ ಸ್ವೀಕರಿಸಲು ನಿರಾಕರಿಸಿದ್ದಾರೆ. ಪತ್ರವನ್ನು ಟಪಾಲು ಪೆಟ್ಟಿಗೆಯಲ್ಲಿ ಹಾಕಿ ಹೋಗುವಂತೆ ಅವರ ಸಂಪರ್ಕಾಧಿಕಾರಿ ಸೂಚನೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !