ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಡಿಗೆ ಬೆಂಕಿ ಹಚ್ಚುವವರ ವಿರುದ್ಧ ಕ್ರಮ; ಅರಣ್ಯ ಕಾಯ್ದೆಗೆ ತಿದ್ದುಪಡಿ’

ಸಚಿವ ಸತೀಶ ಜಾರಕಿಹೊಳಿ ಹೇಳಿಕೆ;
Last Updated 2 ಮಾರ್ಚ್ 2019, 11:51 IST
ಅಕ್ಷರ ಗಾತ್ರ

ಬೆಳಗಾವಿ: ‘ಕಾಡಿಗೆ ಬೆಂಕಿ ಹಚ್ಚುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಇತ್ತೀಚೆಗೆ ಬಂಡಿಪುರ ಅರಣ್ಯದಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಗಟ್ಟಲು ಕಾನೂನು ಬಿಗಿಗೊಳಿಸಬೇಕಾಗಿದೆ’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಳ್ಗಿಚ್ಚು ತಡೆಯಲು ಹೊಗೆ ಪತ್ತೆ ಮಾಡುವ ಉಪಕರಣಗಳು ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗುವುದು. ಕಾಳ್ಗಿಚ್ಚಿನಿಂದ ಸ್ವಲ್ಪ ಪ್ರಮಾಣದಲ್ಲಿ ಅರಣ್ಯ ನಾಶವಾಗಿದೆ. ಆದರೆ, ಸಾಮಾಜಿಕ ತಾಣಗಳಲ್ಲಿ ಊಹಿಸಿದಷ್ಟು ಹಾನಿಯಾಗಿಲ್ಲ. ಮುಂಗಾರು ಆರಂಭವಾದ ನಂತರ ಪುನಃ ಕಾಡಿನಲ್ಲಿ ಹಸಿರು ಚಿಗುರಲಿದೆ’ ಎಂದು ಹೇಳಿದರು.

‘ಬಂಡಿಪುರ ಕಾಳ್ಗಿಚ್ಚಿನಲ್ಲಿ ಯಾವುದೇ ಪ್ರಾಣಿಗಳು ಮೃತಪಟ್ಟಿಲ್ಲ. ಸಾಮಾಜಿಕ ತಾಣಗಳಲ್ಲಿ ಹರದಾಡುತ್ತಿರುವ ಮೃತ ಪ್ರಾಣಿಗಳ ಫೋಟೊಗಳು ಕ್ಯಾಲಿಫೋರ್ನಿಯಾ ಅರಣ್ಯಗಳದ್ದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT