ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರ ಕುಟುಂಬಗಳಿಗೆ ತಲಾ ₹ 1 ಲಕ್ಷ ಪರಿಹಾರ

ಮೀನುಗಾರರ ಕುಟುಂಬದವರನ್ನು ಭೇಟಿ ಮಾಡಿದ ಸಚಿವ ವೆಂಕಟರಾವ್ ನಾಡಗೌಡ
Last Updated 9 ಜನವರಿ 2019, 19:13 IST
ಅಕ್ಷರ ಗಾತ್ರ

ಗೋಕರ್ಣ/ ಭಟ್ಕಳ (ಉತ್ತರ ಕನ್ನಡ): ‘ಸುವರ್ಣ ತ್ರಿಭುಜ’ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೆ ತಾತ್ಕಾಲಿಕವಾಗಿ ತಲಾ ₹ 1 ಲಕ್ಷ ಪರಿಹಾರ ನೀಡಲಾಗುವುದು ಎಂದುಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.

ನಾಪತ್ತೆಯಾದ ದೋಣಿಯಲ್ಲಿದ್ದ ಜಿಲ್ಲೆಯ ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲ್ಲೂಕಿನ ಐವರುಮೀನುಗಾರರ ಮನೆಗಳಿಗೆ ಅವರು ಬುಧವಾರ ಭೇಟಿ ನೀಡಿದರು.

ಭಟ್ಕಳ ಅಳ್ವೆಕೋಡಿಯ ಹರೀಶ ಮೊಗೇರ್ ಹಾಗೂ ಬೆಳ್ನಿಯ ರಮೇಶ ಮೊಗೇರ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ‘ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಇನ್ನೆರಡು ಮೂರು ದಿನಗಳಲ್ಲಿ ವಿತರಣೆಯಾಗಲಿದೆ’ ಎಂದು ತಿಳಿಸಿದರು.

ಉಪಗ್ರಹಗಳ ನೆರವು: ಇದಕ್ಕೂ ಮೊದಲು ಗೋಕರ್ಣ ಸಮೀಪದ ಮಾದನಗೇರಿಯ ಮೀನುಗಾರ ಸತೀಶ ಈಶ್ವರ ಹರಿಕಂತ್ರ ಅವರ ಮನೆಗೆ ಸಚಿವರು ಭೇಟಿ ನೀಡಿದ್ದರು. ಅಲ್ಲಿ ಮಾತನಾಡಿದ ಅವರು, ‘ದೋಣಿ ಮತ್ತು ಮೀನುಗಾರರ ಪತ್ತೆಗೆ ಇಸ್ರೊ ಹಾಗೂ ಗೂಗಲ್ ನೆರವು ಕೋರಲಾಗಿದೆ. ಮೀನುಗಾರರು ನಾಪತ್ತೆಯಾದ ಬಗ್ಗೆ ದೂರು ಕೊಡಲು ತಡವಾಗಿದ್ದೇ ತನಿಖೆಗೆ ಹಿನ್ನಡೆಯಾಗಲು ಕಾರಣ. ಡಿ.15ರ ರಾತ್ರಿ ನಾಪತ್ತೆಯಾದರೆ 22ನೇ ತಾರೀಕಿಗೆ ದೂರು ನೀಡಲಾಗಿದೆ’ ಎಂದುಅಸಮಾಧಾನ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರಕ್ಕೂ ಈಗಾಗಲೇ ವಿಚಾರ ತಿಳಿಸಲಾಗಿದೆ. ಮೀನುಗಾರಿಕಾ ಇಲಾಖೆಯಿಂದ ಮಹಾರಾಷ್ಟ್ರ, ಗುಜರಾತ್ ಸರ್ಕಾರಗಳಿಗೂ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.

ಉಡುಪಿ ಜಿಲ್ಲೆಯ ಮಲ್ಪೆಯಿಂದ ‘ಸುವರ್ಣ ತ್ರಿಭುಜ’ ಹೆಸರಿನ ದೋಣಿಯು ಡಿ.13ರಂದು ಮೀನುಗಾರಿಕೆಗೆ ತೆರಳಿತ್ತು. ಡಿ.15ರಿಂದ ಅದು ಸಂಪರ್ಕಕ್ಕೆ ಸಿಗುತ್ತಿಲ್ಲ. ಆ ದೋಣಿಯಲ್ಲಿ ಒಟ್ಟುಏಳು ಮೀನುಗಾರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT