ಉಪನ್ಯಾಸಕಿಗೆ ಚೂರಿ ಇರಿತ

7

ಉಪನ್ಯಾಸಕಿಗೆ ಚೂರಿ ಇರಿತ

Published:
Updated:

ಕೂಡ್ಲಿಗಿ: ಮಹಿಳೆಯೊಬ್ಬರೊಂದಿಗೆ ಹೊಂದಿದ್ದ ಅನೈತಿಕ ಸಂಬಂಧ ಬಹಿರಂಗಪಡಿಸಿದರು ಎಂಬ ಶಂಕೆಯಿಂದ ತಾಲ್ಲೂಕಿನ ಗುಡೇಕೋಟೆಯ ಜ್ಞಾನ ಸಮೃದ್ಧಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್‌ ಅಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸುಧಾರಾಣಿ ಅವರನ್ನು ಮಂಗಳವಾರ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ ಮೂಲದ ಸುಧಾರಾಣಿ ವೃತ್ತಿ ಸಲುವಾಗಿ ಐದು ವರ್ಷದಿಂದ ಅದೇ ಗ್ರಾಮದಲ್ಲಿ ವಾಸಿಸಿದ್ದಾರೆ.

‘ಶಿಕ್ಷಕರೊಬ್ಬರ ಪತ್ನಿಯೊಂದಿಗೆ ಆರೋಪಿಯು ಅನೈತಿಕ ಸಂಬಂಧ ಹೊಂದಿದ್ದ. ಅದು ಬಹಿರಂಗಗೊಂಡ ನಂತರ ಗ್ರಾಮಸ್ಥರು ಆತನನ್ನು ತರಾಟೆಗೆ ತೆಗೆದುಕೊಂಡು ಬುದ್ಧಿವಾದ ಹೇಳಿದ್ದರು. ಆರು ತಿಂಗಳ ಕಾಲ ಗ್ರಾಮದಿಂದ ದೂರವಿದ್ದ’ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಮಂಗಳವಾರ ಗ್ರಾಮಕ್ಕೆ ಬಂದ ಆರೋಪಿಯು ಮಧ್ಯಾಹ್ನ ಕಾಲೇಜಿನಿಂದ ವಸತಿ ಗೃಹಕ್ಕೆ ಹೋಗುತ್ತಿದ್ದ ಉಪನ್ಯಾಸಕಿಯ ಹೊಟ್ಟೆ ಹಾಗೂ ಬೆನ್ನಿಗೆ ಚೂರಿಯಿಂದ ಇರಿದಿದ್ದಾನೆ. ಗಾಯಗೊಂಡ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಕೂಡ್ಲಿಗಿ ಸಿಪಿಐ ನಹೀಂ ಆಹಮದ್ ತಿಳಿಸಿದರು. 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !