ಸೋಮವಾರ, ಅಕ್ಟೋಬರ್ 14, 2019
22 °C

‘ಡ್ರೀಮ್‌ ಗರ್ಲ್‌’ನಲ್ಲಿ ರಾಜ್‌ ತರುಣ್‌

Published:
Updated:
Prajavani

ಆಯುಷ್ಮಾನ್‌ ಖುರಾನಾ ಅಭಿನಯದ ‘ಡ್ರೀಮ್‌ ಗರ್ಲ್‌’ ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ಯುವ ನಟ ರಾಜ್‌ ತರುಣ್‌ ಅಭಿನಯಿಸಲಿದ್ದಾರೆ.

ರಾಜ್‌ ಶಾಂಡಿಲ್ಯ ನಿರ್ದೇಶನದ ‘ಡ್ರೀಮ್‌ ಗರ್ಲ್‌’ ಸಿನಿಮಾ ಸೆಪ್ಟೆಂಬರ್‌ 13ರಂದು ವಿಶ್ವವ್ಯಾಪಿ ಬಿಡುಗಡೆಯಾಗಿತ್ತು. ಎರಡು ವಾರದಲ್ಲಿಯೇ ₹100 ಕೋಟಿಗಿಂತ ಹೆಚ್ಚು ಗಳಿಕೆ ಮಾಡಿದೆ. ಏಕ್ತಾ ಕಪೂರ್‌ ನಿರ್ಮಾಣದ ಈ ಸಿನಿಮಾದ ಹಕ್ಕನ್ನು ಸುರೇಶ್‌ ಬಾಬು ಅವರು ಪಡೆದುಕೊಂಡಿದ್ದಾರೆ.

ವಿಭಿನ್ನ ಹಾವ ಭಾವಗಳನ್ನು ತೋರಬೇಕಾದ ಸವಾಲಿನ ಪಾತ್ರವಾಗಿರುವ ಕಾರಣ ನಾಯಕನ ಆಯ್ಕೆಯಲ್ಲಿ ಸಿನಿಮಾ ತಂಡಕ್ಕೆ ಗೊಂದಲ ಇತ್ತು. ಆದರೆ ರಾಜ್‌ ತರುಣ್‌ ನಟಿಸಲು ಒಪ್ಪಿದ್ದಾರೆ ಎಂದು ಸಿನಿ ತಂಡ ಪ್ರಕಟಿಸಿದೆ.‘ಸ್ಥಳೀಯತೆಗೆ ತಕ್ಕಂತೆ ಸ್ಕ್ರಿಪ್ಟ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಅವಕಾಶ ಸಿಕ್ಕಿದೆ. ಅನೀಶ್ ಕೃಷ್ಣ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ’ ಎಂದು ಸುರೇಶ್ ಬಾಬು ಹೇಳಿದ್ದಾರೆ.
ಇದನ್ನೂ ಓದಿ: ‘ಡ್ರೀಮ್ ಗರ್ಲ್‌’ಗೆ ಅಂಟಿದ ನಕಲಿನ ಕಳಂಕ!

Post Comments (+)