ಗುರುವಾರ , ನವೆಂಬರ್ 14, 2019
19 °C

ಬೈಕ್ ಸವಾರನಿಗೆ ₹ 18 ಸಾವಿರ ದಂಡ

Published:
Updated:
Prajavani

ಮದ್ದೂರು: ವ್ಯಕ್ತಿಯೊಬ್ಬರು ಕುಡಿದು ಬೈಕ್‌ ಚಾಲನೆ ಮಾಡಿದ್ದಕ್ಕೆ ಹಾಗೂ ಯಾವುದೇ ದಾಖಲಾತಿ ಇಟ್ಟುಕೊಳ್ಳದ್ದಕ್ಕೆ ತಾಲ್ಲೂಕು ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರು ₹ 18 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸಂಚಾರ ಠಾಣೆ ಪೊಲೀಸರು ಸೆ. 12ರಂದು ಪಟ್ಟಣದ ಟಿ.ಬಿ ವೃತ್ತದಲ್ಲಿ ಕೆ.ಶೇಖರ್ ಎಂಬುವರನ್ನು ತಪಾಸಣೆಗೆ ಒಳಪಡಿಸಿದಾಗ ಅವರು ಕುಡಿದು ಬೈಕ್‌ ಚಾಲನೆ ಮಾಡಿರುವುದು ಗೊತ್ತಾಯಿತು. ಡಿ.ಎಲ್‌ ಸೇರಿ ಯಾವುದೇ ದಾಖಲಾತಿ ಇಲ್ಲದ ಕಾರಣ ಬೈಕ್‌ ಜಪ್ತಿ ಮಾಡಿ ಎಫ್‌ಐಆರ್‌ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಾಲಸುಬ್ರಮಣ್ಯ ಅವರು, ಶೇಖರ್ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದಕ್ಕೆ ₹ 10 ಸಾವಿರ, ವಿಮೆ ಇಲ್ಲದಿದ್ದಕ್ಕೆ ₹ 2 ಸಾವಿರ, ಡಿ.ಎಲ್‌ ಇಲ್ಲದಿದ್ದಕ್ಕೆ ₹  5 ಸಾವಿರ ಹಾಗೂ ಹೆಲ್ಮೆಟ್‌ ರಹಿತ ಚಾಲನೆಗೆ  ₹ 1 ಸಾವಿರ ಸೇರಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರತಿಕ್ರಿಯಿಸಿ (+)