7

₹ 3.22 ಕೋಟಿ ಪರಿಹಾರ ಮೊತ್ತ ವಾಪಸ್‌

Published:
Updated:

ಬೆಂಗಳೂರು: ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪ್ರಸಕ್ತ ವರ್ಷ ನೀಡಲಾಗಿದ್ದ ಆರ್ಥಿಕ ನೆರವಿನಲ್ಲಿ ₹ 3.22 ಕೋಟಿಯಷ್ಟು ಮೊತ್ತದ 754 ಚೆಕ್‌ಗಳು ವಾಪಸ್‌ ಬಂದಿವೆ.

ಕಾಂಗ್ರೆಸ್‌ನ ಎಸ್‌.ಎನ್‌. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಈ ಉತ್ತರ ನೀಡಿದ್ದಾರೆ. 2016–17 ಸಾಲಿನಲ್ಲಿ ₹ 4.61 ಕೋಟಿ ಮೊತ್ತದ 1,412 ಚೆಕ್‌ಗಳು ವಾಪಸ್‌ ಬಂದಿದ್ದವು.

ಫಲಾನುಭವಿ ಮೃತಪಟ್ಟಿರುವ ಇಲ್ಲವೆ ಹೆಸರಿನಲ್ಲಿ ತಿದ್ದುಪಡಿ ಇರುವ ಕಾರಣ ಬಹುತೇಕ ಚೆಕ್‌ಗಳು ವಾಪಸ್‌ ಬಂದಿವೆ. ಧನಾದೇಶದ ಅವಧಿ ಮುಕ್ತಾಯಗೊಂಡಿರುವ ಹಾಗೂ ಸಮರ್ಪಕ ದಾಖಲೆಗಳು ಇಲ್ಲದ ಕಾರಣಕ್ಕೂ ಚೆಕ್‌ಗಳನ್ನು ಹಿಂದಿರುಗಿಸಲಾಗಿದೆ. 15 ಜನರಿಗೆ ಬದಲಿ ಧನಾದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !