7
ಹೂವು ಖರೀದಿಗೆ ₹21,000

13 ನಿಮಿಷದ ಪ್ರಮಾಣಕ್ಕೆ ₹59 ಲಕ್ಷ

Published:
Updated:

ಬೆಂಗಳೂರು: ಒಂದೇ ತಿಂಗಳಲ್ಲಿ ನಡೆದ ಇಬ್ಬರು ಮುಖ್ಯಮಂತ್ರಿಗಳ ತಲಾ ಆರೇಳು ನಿಮಿಷದ ಪ್ರಮಾಣವಚನ ಕಾರ್ಯಕ್ರಮಕ್ಕೆ ಖರ್ಚಾಗಿದ್ದು ಬರೋಬ್ಬರಿ ₹58,82,940!

ಆರ್‌ಟಿಐ ಕಾರ್ಯಕರ್ತ ಟಿ.ನರಸಿಂಹಮೂರ್ತಿ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿ ಈ ಬಗ್ಗೆ ವಿವರ ಕೇಳಿದ್ದರು.

ಸರ್ಕಾರ ರಚನೆಗೆ ಬೇಕಾದ ಅಗತ್ಯ ಸ್ಥಾನಗಳು ಇಲ್ಲದಿದ್ದರೂ ಮೇ 17ಕ್ಕೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದರು. ಅದಕ್ಕಾಗಿ ₹15,93,000 ಖರ್ಚು ಮಾಡಿದರು.

ರೈತರ ಮತ್ತು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಅವರ ಕಾರ್ಯಕ್ರಮಕ್ಕೆ ಕೇಂದ್ರದಿಂದ ಯಾವ ಪ್ರಮುಖರೂ ಬಂದಿರಲಿಲ್ಲ. ರಾಜ್ಯದ ಕೆಲವು ನಾಯಕರು ಮಾತ್ರ ಹಾಜರಿದ್ದರು. ಈ ಸಂದರ್ಭಗಳಿಗೆ ಅತಿಥಿಗಳಿಗೆ ನೀಡಿದ ಹೂಗುಚ್ಛದ ವೆಚ್ಚವೇ ₹21,750!.

ಹೀಗೆ ಖರ್ಚು ಮಾಡುವ ಸ್ಪರ್ಧೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇನು ಹಿಂದೆ ಬಿದ್ದಿಲ್ಲ. ಮೇ 23ರಂದು ನಡೆದ ಪ್ರಮಾಣವಚನ ಸಮಾರಂಭದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮತ್ತು  ಜಿ. ಪರಮೇಶ್ವರ ಉಪ ಮುಖ್ಯಮಂತ್ರಿ (ಡಿಸಿಎಂ) ಪ್ರಮಾಣವಚನ ಸ್ವೀಕರಿಸಿದರು. ಇದಕ್ಕೆ ಒಟ್ಟು ಖರ್ಚಾಗಿರುವುದು ₹42,89,940.

ಬಿಳಿ ಬಣ್ಣದ ರೇಷ್ಮೆ ಪಂಚೆ ಹಾಗೂ ರೇಷ್ಮೆ ಅಂಗಿಯಲ್ಲಿ ಕಂಗೊಳಿಸಿದ ಕುಮಾರಸ್ವಾಮಿ ಪ್ರಮಾಣವಚನ ನಡೆದಿದ್ದೂ ಏಳೇ ನಿಮಿಷ.  ಜಟಾಪಟಿಯ ನಡುವೆಯೇ ಸರ್ಕಾರ ರಚಿಸಿದ ಅವರು ಭವ್ಯವಾಗಿಯೇ ಕಾರ್ಯಕ್ರಮ ಏರ್ಪಡಿಸಿದ್ದರು.

**

₹15,93,000: ಯಡಿಯೂರಪ್ಪ ಮಾಡಿರುವ ಖರ್ಚು

₹42,89,940: ಕುಮಾರಸ್ವಾಮಿ ಮಾಡಿರುವ ಖರ್ಚು

ಬರಹ ಇಷ್ಟವಾಯಿತೆ?

 • 27

  Happy
 • 2

  Amused
 • 6

  Sad
 • 2

  Frustrated
 • 33

  Angry

Comments:

0 comments

Write the first review for this !