ಅಕ್ರಮವಾಗಿ ಸಾಗಿಸುತ್ತಿದ್ದ ₹1.65 ಕೋಟಿ ನಗದು ವಶ; ಇಬ್ಬರ ಬಂಧನ

7

ಅಕ್ರಮವಾಗಿ ಸಾಗಿಸುತ್ತಿದ್ದ ₹1.65 ಕೋಟಿ ನಗದು ವಶ; ಇಬ್ಬರ ಬಂಧನ

Published:
Updated:

ಉಡುಪಿ: ಇಲ್ಲಿನ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಶುಕ್ರವಾರ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ದಾಖಲೆ ಇಲ್ಲದೆ  ಸಾಗಿಸಲಾಗುತ್ತಿದ್ದ ₹1.65 ಕೋಟಿ ನಗದನ್ನು ರೈಲ್ವೆ ರಕ್ಷಣಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ರಾಜಸ್ತಾನದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ‌.

ಮುಂಬೈಯಿಂದ ಎರ್ನಾಕುಲಂ ಮಾರ್ಗದಲ್ಲಿ ಸಂಚರಿಸುವ ನೇತ್ರಾವತಿ ಏಕ್ಸ್‌ಪ್ರೆಸ್‌ ರೈಲಿನಲ್ಲಿ ಹಣ ಸಾಗಾಟ ಮಾಡಲಾಗುತ್ತಿತ್ತು. ಈ ಹಣವನ್ನು ಪಡೆಯಲು ಇಂದ್ರಾಳಿ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಕಾಯುತ್ತ ಕುಳಿತ್ತಿದ್ದ. ಈ ಬಗ್ಗೆ ಸಂಶಯಗೊಂಡ ರೈಲ್ವೆ ರಕ್ಷಣಾ ಸಿಬ್ಬಂದಿ ವಿಚಾರಣೆ ಮಾಡಿದಾಗ  ಅಕ್ರಮ ಪತ್ತೆಯಾಗಿದೆ.

ಐಟಿ ಅಧಿಕಾರಿಗಳು, ಉಡುಪಿ ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿಗಳು ಸ್ಥಳಕ್ಕೆ ಭೇಟಿದ್ದಾರೆ. ರೈಲ್ವೆ ರಕ್ಷಾಣಾ ದಳ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !