ಶಿರಾಡಿ ಘಾಟ್‌ ಮಾರ್ಗ ಬದಲಾವಣೆ: ಕೆಎಸ್‌ಆರ್‌ಟಿಸಿಗೆ ₹ 3 ಕೋಟಿ ನಷ್ಟ

7
ಮಾರ್ಗ ಬದಲಾಯಿಸಿ ಸಂಚಾರ

ಶಿರಾಡಿ ಘಾಟ್‌ ಮಾರ್ಗ ಬದಲಾವಣೆ: ಕೆಎಸ್‌ಆರ್‌ಟಿಸಿಗೆ ₹ 3 ಕೋಟಿ ನಷ್ಟ

Published:
Updated:

ಬೆಂಗಳೂರು: ಶಿರಾಡಿ ಘಾಟ್‌ನಲ್ಲಿ ಭೂಕುಸಿತದ ಕಾರಣದಿಂದ ಮಾರ್ಗ ಬದಲಾಯಿಸಿ ಸಂಚರಿಸಿದ ಪರಿಣಾಮ ಕೆಎಸ್‌ಆರ್‌ಟಿಸಿಗೆ ಸುಮಾರು ₹ 3 ಕೋಟಿಯಷ್ಟು ನಷ್ಟ ಉಂಟಾಗಿದೆ.

‘ನಗರದಿಂದ ರಾಜಹಂಸ, ಐರಾವತ, ಸ್ಲೀಪರ್‌ ಮತ್ತು ಎಸಿ ಸ್ಲೀಪರ್‌ ಬಸ್‌ಗಳು ಶಿರಾಡಿ ಘಾಟಿ ಮಾರ್ಗದ ಬದಲು ಚಾರ್ಮಾಡಿ ಮಾರ್ಗವಾಗಿ ಸಂಚರಿಸಿದ್ದವು. ಇದರಿಂದ ಸುಮಾರು 70 ಕಿಲೋಮೀಟರ್‌ಗಳಷ್ಟು ಹೆಚ್ಚು ದೂರ ಸುತ್ತಿ ಪ್ರಯಾಣಿಸಬೇಕಿತ್ತು. ಪ್ರಕೃತಿ ವಿಕೋಪದ ಕಾರಣ ಆಗಸ್ಟ್‌ 15ರಿಂದ ಕೆಲವು ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸೀಮಿತ ಸಂಖ್ಯೆಯ ಬಸ್‌ಗಳನ್ನು ಚಾರ್ಮಾಡಿ ಮಾರ್ಗದಲ್ಲಿ ಓಡಿಸಲಾಗಿತ್ತು’ ಎಂದು ಕೆಎಸ್‌ಆರ್‌ಟಿಸಿ ಬೆಂಗಳೂರು ಕೇಂದ್ರದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಭಾಕರ ರೆಡ್ಡಿ ಹೇಳಿದರು. 

‘ಮಂಗಳೂರು– ಬೆಂಗಳೂರು ಮಾರ್ಗದಲ್ಲಿ ಸುಮಾರು 63 ಟ್ರಿಪ್‌ಗಳಿವೆ. ಈ ಪೈಕಿ ಉಡುಪಿ– ಕುಂದಾಪುರಕ್ಕೆ 7 ಬಸ್‌ಗಳು ಸಂಚರಿಸುತ್ತವೆ. ದ್ವಿಮುಖ ಸಂಚಾರ ಪರಿಗಣಿಸಿದರೆ 126 ಬಸ್‌ಗಳು ಸಂಚರಿಸುತ್ತವೆ. ಸಂಚಾರ ರದ್ದುಪಡಿಸಿರುವುದು, ಸುತ್ತಿ ಬಳಸಿ ಸಂಚರಿಸಿದ ಪರಿಣಾಮ ನಾವು ನಷ್ಟ ಅನುಭವಿಸಬೇಕಾಯಿತು’ ಎಂದು ನಿಗಮದ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ತಿಳಿಸಿದರು.

 351 ಕಿಲೋ ಮೀಟರ್‌– ಮಂಗಳೂರು– ಬೆಂಗಳೂರು (ಶಿರಾಡಿ ಘಾಟಿ ಮೂಲಕ) ಅಂತರ
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !