‘ಮಂತ್ರಾಲಯ ಅಭಿವೃದ್ಧಿಗೆ ₹ 43 ಕೋಟಿ’

7

‘ಮಂತ್ರಾಲಯ ಅಭಿವೃದ್ಧಿಗೆ ₹ 43 ಕೋಟಿ’

Published:
Updated:

ರಾಯಚೂರು: ಕೇಂದ್ರ ಸರ್ಕಾರದ ‘ಸ್ವಚ್ಛತಾ ಐಕಾನ್‌’ ಪಟ್ಟಿಯಲ್ಲಿರುವ ಮಂತ್ರಾಲಯದ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ₹ 43 ಕೋಟಿ ಅನುದಾನ ಒದಗಿಸಲಾಗುವುದು ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ ಜಿಗಜಿಣಗಿ ಹೇಳಿದರು.

ಸೋಮವಾರ ಮಠಕ್ಕೆ ಭೇಟಿ ನೀಡಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಮಠವು ಸಿದ್ಧಪಡಿಸಿರುವ ಯೋಜನೆಯ ಮಾಹಿತಿ ಪಡೆದ ಬಳಿಕ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರವು ಮಠದ ಪ್ರಸ್ತಾವ ಒಪ್ಪಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸಲಾಗುವುದು. ಮಠವು ಎರಡು ವರ್ಷಗಳಿಂದ ಆರಂಭಿಸಿರುವ ಸ್ವಚ್ಛತಾ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಮೆಚ್ಚಿಕೊಂಡಿದ್ದಾರೆ’ ಎಂದು ಹೇಳಿದರು.

ಇಲಾಖೆಯು ಮೂರನೇ ಹಂತದಲ್ಲಿ ದೇಶದ 10 ತಾಣಗಳನ್ನು ಸ್ವಚ್ಛತಾ ಐಕಾನ್‌ ಎಂದು ಈಚೆಗೆ ಗುರುತಿಸಿತ್ತು. ಅದರಲ್ಲಿ ಮಂತ್ರಾಲಯವೂ ಸೇರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !