ಸೋಮವಾರ, ಆಗಸ್ಟ್ 26, 2019
27 °C
ಒಂದೇ ದಿನಕ್ಕೆ ಬಂತು 8 ಟಿ.ಎಂ.ಸಿ. ನೀರು

ತುಂಗಭದ್ರೆಗೆ 1 ಲಕ್ಷ ಕ್ಯುಸೆಕ್‌ ಒಳಹರಿವು

Published:
Updated:

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿದು ಬರುತ್ತಿದೆ.

ಗುರುವಾರ ಜಲಾಶಯದಲ್ಲಿ 48.79 ಟಿ.ಎಂ.ಸಿ. ಅಡಿ ನೀರು ಸಂಗ್ರಹವಾಗಿದೆ. 1,02,444 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ಬುಧವಾರ 40,781 ಕ್ಯುಸೆಕ್‌ ಒಳಹರಿವು ಇತ್ತು. 40.13 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿತ್ತು. ಒಂದೇ ದಿನದಲ್ಲಿ ಎಂಟು ಟಿ.ಎಂ.ಸಿ. ಅಡಿಗೂ ಅಧಿಕ ನೀರು ಬಂದಿದೆ.

ಶಿವಮೊಗ್ಗದ ತುಂಗಾ ಜಲಾಶಯದಿಂದ 85,590 ಕ್ಯುಸೆಕ್‌, ಭದ್ರಾ ಅಣೆಕಟ್ಟೆಯಿಂದ 28,797 ಕ್ಯುಸೆಕ್‌ ನೀರು ನದಿಗೆ ಹರಿಸುತ್ತಿರುವ ಕಾರಣ ತುಂಗಭದ್ರಾ ಅಣೆಕಟ್ಟೆಯ ಒಳಹರಿವು ಹೆಚ್ಚಾಗಿದೆ. ಒಳಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.

ಅಣೆಕಟ್ಟೆಯ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 133 ಟಿ.ಎಂ.ಸಿ. ಅಡಿಯಿದ್ದು, 33 ಟಿ.ಎಂ.ಸಿ. ಅಡಿ ಹೂಳು ತುಂಬಿಕೊಂಡಿರುವ ಕಾರಣ 100 ಟಿ.ಎಂ.ಸಿ. ಅಡಿ ವರೆಗೆ ನೀರು ಸಂಗ್ರಹಿಸಬಹುದು.

 

Post Comments (+)