‘ಗ್ರಂಥಾಲಯ ಇಲಾಖೆ 1 ಲಕ್ಷ ಪುಸ್ತಕ’

7
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದ್ದ 5 ವರ್ಷ ಹಳೆಯ ಪುಸ್ತಕಗಳು

‘ಗ್ರಂಥಾಲಯ ಇಲಾಖೆ 1 ಲಕ್ಷ ಪುಸ್ತಕ’

Published:
Updated:
Deccan Herald

ಬೆಂಗಳೂರು: ‘ನಮ್ಮ ಇಲಾಖೆಯಲ್ಲಿರುವ ಐದು ವರ್ಷಗಳ ಹಳೆಯದಾದ ಸುಮಾರು 1 ಲಕ್ಷ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆಗೆ ಉಚಿತವಾಗಿ ನೀಡಿದ್ದೇವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ತಿಳಿಸಿದರು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಹಾಯ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪುಸ್ತಕ ಪ್ರಾಧಿಕಾರದ 300 ಶೀರ್ಷಿಕೆಗಳ 150 ಪ್ರತಿ ಸೇರಿ ಒಟ್ಟು 45 ಸಾವಿರ ಪುಸ್ತಕಗಳನ್ನು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 150 ಶೀರ್ಷಿಕೆಗಳ 200 ಪ್ರತಿ ಸೇರಿ ಒಟ್ಟು 30 ಸಾವಿರ ಪುಸ್ತಕಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಕಟಿಸಿದರು 150 ಶೀರ್ಷಿಕೆಗಳ 200 ಪ್ರತಿಗಳು ಸೇರಿ ಒಟ್ಟು 30 ಸಾವಿರ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆ ನೀಡಲಾಗಿದೆ’ ಎಂದು ವಿವರಿಸಿದರು.

‘ಮಾರಾಟವಾಗದೆ ಉಳಿದಿದ್ದ ಪುಸ್ತಕಗಳು ಉಪಯೋಗವಾಗಬೇಕೆಂದು ಗ್ರಂಥಾಲಯ ಇಲಾಖೆ ನೀಡುತ್ತಿದ್ದೇವೆ. ಕೇವಲ ಪುಸ್ತಕಗಳನ್ನು ಪ್ರಕಟಿಸುವುದಷ್ಟೇ ಅಲ್ಲ, ಅವುಗಳನ್ನು ಜನರಿಗೆ ಒದಿಸುವುದು ನಮ್ಮ ಕರ್ತವ್ಯ’ ಎಂದು ಮಾಹಿತಿ ನೀಡಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿರುವ ಪುಸ್ತಕವನ್ನು ಪ್ರತ್ಯೇಕ ರ್‍ಯಾಕ್‌ನಲ್ಲಿ ಇಡಲಾಗುತ್ತದೆ. ಜೊತೆಗೆ ರಾಜ್ಯದ ಎಲ್ಲಾ ಗ್ರಂಥಾಲಯಗಳಿಗೂ ಪುಸ್ತಕಗಳನ್ನು ನೀಡುತ್ತೇವೆ’ ಎಂದು ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್‌ ಎಸ್‌. ಹೊಸಮನಿ ತಿಳಿಸಿದರು.

ಮಾಹಿತಿ ಕೇಂದ್ರ: ಕಲಾವಿದರು ಹಾಗೂ ಸಾರ್ವಜನಿಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲಾ ಯೋಜನೆಗಳ ಮಾಹಿತಿ ನೀಡಲು ಹಾಗೂ ಮನವಿಗಳನ್ನು ಸ್ವೀಕರಿಸುವುದಕ್ಕಾಗಿ ಈ ಮಾಹಿತಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

‘ಎಲ್ಲಾ ಸಂದರ್ಭಗಳಲ್ಲಿಯೂ ಅಧಿಕಾರಿಗಳು ಸಿಗುವುದಿಲ್ಲ. ಇದರಿಂದ ಜನ ಸಾಕಷ್ಟು ಬಾರಿ ಅಲೆದಾಡಬೇಕಾಗುತ್ತದೆ. ಅದನ್ನು ತಪ್ಪಿಸಲು ಹಾಗೂ ಸಮಗ್ರ ಮಾಹಿತಿ ದೊರೆಯಬೇಕು ಎನ್ನುವ ಕಾರಣದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ’ ಎಂದು ಇಲಾಖೆ ನಿರ್ದೇಶಕ ವಿಶು ಕುಮಾರ್‌ ಮಾಹಿತಿ ನೀಡಿದರು.

ಧನ ಸಹಾಯ, ಅರ್ಜಿ ಆಹ್ವಾನ ಹಾಗೂ ಗೌರವ ಧನ ಕುರಿತು ಮಾಹಿತಿ ಇಲ್ಲಿ ದೊರೆಯಲಿದೆ. ಇದರಿಂದಾಗಿ, ಅನಕ್ಷರಸ್ಥ ಕಲಾವಿದರಿಗೆ ಉಪಯೋಗವಾಗಲಿದೆ. ಬೆಳಿಗ್ಗೆ 10 ರಿಂದ 5ರವರೆಗೆ ಈ ಕೇಂದ್ರ ಕಾರ್ಯನಿರತವಾಗಿರುತ್ತದೆ. ಕರೆ ಮಾಡಿಯೂ ಮಾಹಿತಿ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ–08022213530

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !