ಗುರುವಾರ , ನವೆಂಬರ್ 14, 2019
22 °C

ಜೋಗಿ, ಸುಧಾಗೆ ‘ಅಮ್ಮ ಪ್ರಶಸ್ತಿ’

Published:
Updated:

ಕಲಬುರ್ಗಿ: ಸೇಡಂ ತಾಲ್ಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನವು ನೀಡುವ ರಾಜ್ಯಮಟ್ಟದ ‘ಅಮ್ಮ ಪ್ರಶಸ್ತಿ’ಗೆ ಪತ್ರಕರ್ತ ಜೋಗಿ (ಗಿರೀಶರಾವ), ಲೇಖಕಿ ಸುಧಾ ಆಡುಕಳ, ಸಾಹಿತಿ ಜಿ.ಎನ್.ನಾಗರಾಜ್, ಅನುವಾದಕ ಪ್ರಭಾಕರ ಸಾತಖೇಡ, ಕಥೆಗಾರ ಚನ್ನಪ್ಪ ಕಟ್ಟಿ ಮತ್ತು ಕವಯತ್ರಿ ಭುವನಾ ಹಿರೇಮಠ ಅವರ ಕೃತಿಗಳು ಆಯ್ಕೆಯಾಗಿವೆ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

‘ಅಮ್ಮ ಗೌರವ ಪುರಸ್ಕಾರ’ಕ್ಕೆ ಸಾಹಿತಿ ಪ್ರೊ. ದೇವರಕೊಂಡಾರೆಡ್ಡಿ, ವಿಲಾಸವತಿ ಖೂಬಾ,ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ, ಲೇಖಕ ಲಿಂಗಾರೆಡ್ಡಿ ಶೇರಿ ಸೇಡಂ ಮತ್ತು ರಂಗತಜ್ಞ ಜೀವನರಾಂ ಸುಳ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)