ಹುಬ್ಬಳ್ಳಿ: ಪಾಟೀಲ ಪುಟ್ಟಪ್ಪಗೆ 100ನೇ ಜನ್ಮದಿನ ಸಂಭ್ರಮ

7

ಹುಬ್ಬಳ್ಳಿ: ಪಾಟೀಲ ಪುಟ್ಟಪ್ಪಗೆ 100ನೇ ಜನ್ಮದಿನ ಸಂಭ್ರಮ

Published:
Updated:

ಹುಬ್ಬಳ್ಳಿ: ಹಿರಿಯ ಪತ್ರಕರ್ತ, ನಾಡೋಜ ಡಾ.ಪಾಟೀಲ ಪುಟ್ಟಪ್ಪನವರು ಸೋಮವಾರ ಮಕ್ಕಳು, ಮೊಮ್ಮಕ್ಕಳು, ಕುಟುಂಬ ವರ್ಗದವರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ 100ನೇ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯವು ಮತ್ತಷ್ಟು ಸುಖ, ಸಮೃದ್ಧಿಯಾಗುವಂತೆ ಜನರು ಶ್ರಮಿಸಲಿ. ನಾಡು, ನುಡಿ ವಿಷಯದಲ್ಲಿ ಆಗಿರುವ ಕೆಲಸಗಳಿಗಿಂತ ಆಗಬೇಕಾಗಿರುವ ಕೆಲಸಗಳು ಬಹಳಷ್ಟಿದೆ. ಜನ ಇದಕ್ಕೆ ಅಣಿಯಾಗಬೇಕು’ ಎಂದು ಹೇಳಿದರು.

‘ಕರ್ನಾಟಕ ಏಕೀಕರಣ, ಗೋಕಾಕ್ ಚಳವಳಿ ಸೇರಿದಂತೆ ನಾಡಿನ ಪ್ರಮುಖ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಪಾಪು ಅವರಿಗೆ ರಾಜ್ಯ ಸರ್ಕಾರ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಮಹದಾಯಿ, ಕಳಸಾ ಬಂಡೂರಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಅಮೃತ ಇಜಾರಿ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !