ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ: ಒಂದೇ ದಿನ 12 ಜನರಿಗೆ ಕೋವಿಡ್ ದೃಢ

Last Updated 8 ಮೇ 2020, 12:26 IST
ಅಕ್ಷರ ಗಾತ್ರ

ಕಾರವಾರ:ಜಿ‌ಲ್ಲೆಯ ಭಟ್ಕಳದಲ್ಲಿ ಶುಕ್ರವಾರ ಒಂದೇ ದಿನ ಐದು ತಿಂಗಳ ಮಗು ಹಾಗೂ ಮೂರು ವರ್ಷದ ಬಾಲಕಿ ಸೇರಿದಂತೆ 12 ಜನರಿಗೆಕೋವಿಡ್ 19 ದೃಢಪಟ್ಟಿದೆ. ಈ ಮೂಲಕ ತಾಲ್ಲೂಕಿನಲ್ಲಿಸೋಂಕಿತರ ಒಟ್ಟುಸಂಖ್ಯೆ 24ಕ್ಕೇರಿದೆ. ಅವರಲ್ಲಿ 11 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ.

ಹೊಸದಾಗಿ ದೃಢಪಟ್ಟಿರುವ ಎಲ್ಲರೂ ಮೇ 5ರಂದು ಕೋವಿಡ್ ಖಚಿತವಾಗಿದ್ದ18 ವರ್ಷದ ಯುವತಿಯ (ರೋಗಿ ಸಂಖ್ಯೆ 659) ಸಂಪರ್ಕಕ್ಕೆ ಬಂದಿದ್ದರು. ಆದರೆ, ಆಕೆ ಎಲ್ಲಿಗೂ ಪ್ರಯಾಣಿಸದೇ ಇದ್ದರೂ ಅವರ ಅಕ್ಕ, ಭಾವತಮ್ಮ ಮಗುವಿನ ಚಿಕಿತ್ಸೆಗೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಏ.20ರಂದು ಹೋಗಿದ್ದರು. ಈಗ ಅವರಿಗೂ ಕೋವಿಡ್ ದೃಢಪಟ್ಟಿದೆ. ಅಲ್ಲಿ ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಮಹಿಳೆಯೊಬ್ಬರು ಮೃತಪಟ್ಟಿದ್ದರುಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

ಉಳಿದಂತೆ, 12 ಮಂದಿಯ ಪೈಕಿ 11 ಮತ್ತು 12 ವರ್ಷದ ಇಬ್ಬರು ಬಾಲಕಿಯರು, 83 ವರ್ಷದ ಒಬ್ಬ ಹಿರಿಯ ಪುರುಷ, 75 ವರ್ಷದ ಹಿರಿಯ ಮಹಿಳೆಯೂ ಸೇರಿದ್ದಾರೆ. ಎಲ್ಲರನ್ನೂ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಆರಂಭಿಸಲಾಗಿರುವ ವಿಶೇಷ ಕೊರೊನಾ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

‘ಜಿಲ್ಲೆಯಲ್ಲಿ ಕೊರೊನಾ ವೈರಸ್ ಸಮುದಾಯಕ್ಕೆ ಹರಡಿಲ್ಲ. ದೃಢಪಟ್ಟಿರುವ ಎಲ್ಲ 24 ಪ್ರಕರಣಗಳೂ ಕಂಟೈನ್‌ಮೆಂಟ್ ವಲಯದ ಒಳಗೇ ಇವೆ. ಅಲ್ಲದೇ ವೈರಸ್ ಹರಡಿದ ಮೂಲವೂ ಗೊತ್ತಾಗಿದೆ. ಹಾಗಾಗಿ ಯಾರೂ ಗಾಬರಿ ಪಡುವ ಅಗತ್ಯವಿಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT