ಚಿತ್ರದುರ್ಗ: 13, 14ರಂದು ಬಂಡಾಯ ಸಾಹಿತ್ಯ ಸಂವಾದ

7
ಬಂಡಾಯ ಸಾಹಿತ್ಯ ಸಂಘಟನೆಯಿಂದ ಆಯೋಜನೆ

ಚಿತ್ರದುರ್ಗ: 13, 14ರಂದು ಬಂಡಾಯ ಸಾಹಿತ್ಯ ಸಂವಾದ

Published:
Updated:

ಬೆಂಗಳೂರು: ಬಂಡಾಯ ಸಾಹಿತ್ಯ ಸಂಘಟನೆ ವತಿಯಿಂದ ಅ. 13 ಮತ್ತು 14ರಂದು ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಸಾಹಿತ್ಯ ಸಂವಾದ ನಡೆಯಲಿದೆ. 

ಭಾರತೀಯ ಸಾಹಿತ್ಯ ಮತ್ತು ಬಂಡಾಯ ಪರಂಪರೆ ಕುರಿತ ಪರಿಕಲ್ಪನಾತ್ಮಕ ಚಿಂತನೆ ನಡೆಯಲಿದೆ. 13ರಂದು ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ದಕ್ಷಿಣ ಭಾರತದ ಎಲ್ಲ ಭಾಷಾ ಸಾಹಿತ್ಯ ಮತ್ತು ಹಿಂದಿ, ಉರ್ದು, ಪಂಜಾಬಿ, ಅಸ್ಸಾಮಿ, ಕಾಶ್ಮೀರ, ಗುಜರಾತಿ, ಮರಾಠಿ, ಕರ್ನಾಟಕದ ಪ್ರಾದೇಶಿಕ ಭಾಷೆಗಳಾದ ಬ್ಯಾರಿ, ಕೊಡವ, ಕೊಂಕಣಿ, ತುಳು, ಲಂಬಾಣಿ ಸಾಹಿತ್ಯದೊಳಗಿನ ಬಂಡಾಯ ಪರಂಪರೆಯ ಬಗ್ಗೆ ಉಪನ್ಯಾಸ, ಸಂವಾದ ನಡೆಯಲಿದೆ.

ಕಾರ್ಯಕ್ರಮವನ್ನು ಪ್ರೊ.ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ. ಜಿ.ರಾಮಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಬಾನು ಮುಷ್ತಾಕ್ ಭಾಗವಹಿಸಲಿದ್ದಾರೆ. 

11.30ರಿಂದ ಸಂಜೆ 4.30ರವರೆಗೆ ದಕ್ಷಿಣ ಭಾರತದ ಭಾಷೆಗಳ ಸಾಹಿತ್ಯದ ಕುರಿತು ಉಪನ್ಯಾಸ ನಡೆಯಲಿದೆ. ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಅ. 14ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.15ರವರೆಗೆ ಉತ್ತರ ಭಾರತದ ವಿವಿಧ ಭಾಷೆಗಳ ಸಾಹಿತ್ಯ ಕುರಿತ ಉಪನ್ಯಾಸ ನಡೆಯಲಿದೆ. ಸಂಜೆ 4.30ರಿಂದ ಕವಿಗೋಷ್ಠಿ ನಡೆಯಲಿದೆ. ಸಂಜೆ 6.30ರಿಂದ ಸಮಾರೋಪ ನಡೆಯಲಿದೆ.

ಎಲ್‌.ಹನುಮಂತಯ್ಯ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಚಂದ್ರಶೇಖರ ಪಾಟೀಲ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಾಳೇಗೌಡ ನಾಗವಾರ, ಬಿ.ಎಲ್‌.ವೇಣು, ಆರ್‌.ಮಲ್ಲಿಕಾರ್ಜುನಯ್ಯ, ಗಂಗಾಧರ ದಾವಣಗೆರೆ ಭಾಗವಹಿಸಲಿದ್ದಾರೆ.

ಮಾಹಿತಿಗೆ ಸಿ.ಶಿವಲಿಂಗಪ್ಪ (99720 769240, ಜೆ. ಕರಿಯಪ್ಪ ಮಾಳಿಗೆ (94821 08756) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !