ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧ ಗಂಟೆಯಲ್ಲಿ 16 ಮುದ್ದೆ ತಿಂದ ಭೂಪ!

Last Updated 14 ಜನವರಿ 2019, 4:32 IST
ಅಕ್ಷರ ಗಾತ್ರ

ಮಾಲೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಲ್ಲಿನ ಮಾರುತಿ ಬಡಾವಣೆಯಲ್ಲಿ ಭಾನುವಾರ ಗ್ರಾಮೀಣ ಸಾಂಸ್ಕೃತಿಕ ವೇದಿಕೆಯು ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ‘ರಾಗಿ ಮುದ್ದೆ ತಿನ್ನುವ ಸ್ಪರ್ಧೆ’ಯಲ್ಲಿ ದೊಡ್ಡ ಕಡತೂರು ಗ್ರಾಮದ 60 ವರ್ಷದ ರೈತ ಗುರಪ್ಪಶೆಟ್ಟಿ ಅರ್ಧ ಗಂಟೆಯಲ್ಲಿ ಕೋಳಿ ಸಾರಿನೊಂದಿಗೆ 16 ಮುದ್ದೆ ತಿಂದು ಪ್ರಥಮ ಸ್ಥಾನ ಪಡೆದರು. ಅವರಿಗೆ ₹ 15 ಸಾವಿರ ನಗದು ಮತ್ತು ಟ್ರೋಫಿ ನೀಡಲಾಯಿತು.

ಪ್ರತಿ ರಾಗಿ ಮುದ್ದೆ 250 ಗ್ರಾಂ ತೂಕ ಇತ್ತು. ಸ್ಪರ್ಧೆಯಲ್ಲಿ 28 ಮಂದಿ ಭಾಗವಹಿಸಿದ್ದರು. ಮುದ್ದೆಗೆ ಕೋಳಿ ಸಾರು ಹಾಗೂ ಅವರೆ ಕಾಳು ಸಾರು ನೀಡಲಾಗಿತ್ತು. ಬಹುತೇಕರು ಕೋಳಿ ಸಾರು ಹಾಕಿಸಿಕೊಂಡರು.

ಸ್ಪರ್ಧೆಯಲ್ಲಿ ನಾಲ್ಕು ಸುತ್ತುಗಳಿದ್ದವು. ಅರ್ಧ ಗಂಟೆ ನಿಗದಿಗೊಳಿಸಲಾಗಿತ್ತು. ಬಹುತೇಕರು ಮೊದಲ ಸುತ್ತಿನಲ್ಲಿ 4 ಮುದ್ದೆ ತಿಂದು ಸುಸ್ತಾದರು. ಆದರೆ ಗುರಪ್ಪಶೆಟ್ಟಿ ನಾಲ್ಕು ಸುತ್ತಿನಲ್ಲಿಯೂ ಭರ್ಜರಿಯಾಗಿಯೇ ಮುದ್ದೆ ತಿಂದರು. ಶೆಟ್ಟರ ಮುದ್ದೆ ತಿನ್ನುವ ಬಗೆಯನ್ನು ಜನರು ಅಚ್ಚರಿಯಿಂದ ಕಣ್ತುಂಬಿಕೊಂಡರು. ಎರಡು ವರ್ಷಗಳ ಹಿಂದಿನ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಗುರಪ್ಪ 13 ಮುದ್ದೆ ತಿಂದು ಪ್ರಥಮ ಸ್ಥಾನ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT