ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ಸುರಕ್ಷತೆಯೇ ಮುಖ್ಯ

Last Updated 17 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಚುನಾವಣೆ ಎಂದ ಕೂಡಲೇ ಪುರುಷರೇ ನಿರ್ಣಾಯಕರು ಎನ್ನುವ ವಾತಾವರಣ ಈಗ ಇಲ್ಲ. ಮಹಿಳೆಯರೂ ತಮ್ಮ ಮತದಾನದ ಹಕ್ಕನ್ನು ಯೋಚಿಸಿ ಚಲಾಯಿಸುವ ಶಕ್ತಿ ಹೊಂದಿದ್ದಾರೆ. ಆಕೆಯ ನಿರ್ಧಾರವೂ ನಿರ್ಣಾಯಕ. ಮತದಾನದಕ್ಕೆ ಹೋಗುವ ತಯಾರಿ, ಯಾವ ವಿಷಯದ ಆಧಾರದಲ್ಲಿ ಮತ ಚಲಾಯಿಸುತ್ತಾರೆ ಎಂಬುವುದರ ಕುರಿತು ಕೆಲವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಮತದಾನ ನಮ್ಮ ಹಕ್ಕು. ಇದರೊಟ್ಟಿಗೆ ನಮಗೊಂದು ಜವಾಬ್ದಾರಿಯೂ ಹೌದು. ನಾವು ಈಗ ಹಾಕುವ ಮತ ಲೋಕಸಭೆಗೆ ನಮ್ಮ ಪ್ರತಿನಿಧಿಗಳನ್ನು ಆಯ್ದುಕೊಳ್ಳಲು. ನಮ್ಮ ಹಿತದ ಜೊತೆಗೆ ದೇಶದ ಹಿತವೂ ಮುಖ್ಯವೇ. ನಾನು ಹೆಣ್ಣು, ಹೀಗಾಗಿ ಮಹಿಳೆಯರ ರಕ್ಷಣೆಗೆ ಸಂಬಂಧಿಸಿದಂತೆ ಯಾರು ಏನು ಮಾಡಿದ್ದಾರೆ, ತಾವು ಆರಿಸಿ ಬಂದರೆ ಏನು ಮಾಡುತ್ತೇವೆ ಎಂದಿದ್ದಾರೆ ಎನ್ನುವುದನ್ನು ಮುಖ್ಯವಾಗಿ ಗಮನಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎನ್ನುತ್ತಾರೆ ದೀಪಾಂಜಲಿ ನಗರದ ಸುಷ್ಮಾ.

ಮೊದಲಿನಿಂದಲೂ ಮತದಾನದ ದಿನ ಎಂದರೆ ನನಗೆ ಬಹಳ ಖುಷಿ. ಆ ಒಂದು ದಿನವಾದರೂ ನಾವೇ ಪ್ರಭು ಎಂದು ಅನ್ನಿಸುತ್ತದೆ. ಬೆರಳಿಗೆ ಶಾಯಿ ಹಾಕಿಸಿಕೊಳ್ಳೋದು ಕೂಡ ಒಂದು ಸಂಭ್ರಮ. ನಮ್ಮ ಹಕ್ಕು ಚಲಾಯಿಸುವ ದಿನ ಅಲ್ವಾ.. ಅಪ್ಪ, ಅಮ್ಮ ಸೇರಿ ನಾವು ಎಲ್ಲರೂ ಬೆಳಿಗ್ಗೆಯೇ ಎದ್ದು ಬೂತ್‌ಗೆ ಹೋಗಿ ಮತ ಹಾಕಿ ಬರುತ್ತೇವೆ. ಸ್ಥಳೀಯ ಸಮಸ್ಯೆಗಳೇ ನನಗೆ ಮುಖ್ಯ. ಸಂಸದರು ನಮ್ಮ ಕೈಗೆ ಸಿಗುತ್ತಾರಾ, ನಮ್ಮ ಸಮಸ್ಯೆಗೆ ಹೇಗೆ ಸ್ಪಂದಿಸುತ್ತಾರಾ.. ಎಂದೆಲ್ಲ ಗಮನಿಸುತ್ತೇನೆ ಎನ್ನುವುದು ವಸಂತನಗರದಛಾಯಾ ಅವರ ಅಭಿಪ್ರಾಯ.

ಮತದಾನಕ್ಕೆ ತಯಾರಿ ಹೇಗೆ?

ಮತದಾನಕ್ಕಾಗಿ ಹೆಚ್ಚಿನ ತಯಾರಿಯನ್ನೇನು ಮಾಡಿಕೊಂಡಿಲ್ಲ. ವೋಟರ್‌ ಕಾರ್ಡ್‌ ಎಲ್ಲ ಇದೆ. ಗಂಡನೊಂದಿಗೆ ಹೋಗಿ ಮತ ಹಾಕುವುದಷ್ಟೇ. ರಜಾ ಇರುವುದರಿಂದ ಬೆಳಿಗ್ಗೆ ಏಳುವುದು ಸ್ವಲ್ಪ ತಡವೇ. ಮಧ್ಯಾಹ್ನದ ಹೊತ್ತಿಗೆ ಬೂತ್‌ಗೆ ಹೋಗುತ್ತೇವೆ. ನಮಗೆ ದೇಶದ ಜೊತೆಗೆ ನಗರದ ಹಿತ ಮತ್ತು ಸ್ವಚ್ಛತೆ ಮುಖ್ಯ ಎನ್ನುತ್ತಾರೆ ಜೆ.ಪಿ. ನಗರದ ಸುಮಂಗಲಾ.

ಮಹಿಳೆಯರ ಸುರಕ್ಷತೆಗೆ ಆದ್ಯತೆ

ವಿಜಯನಗರದ ಕಾವೇರಿ ಅವರದು ಬೇರೆಯದೇ ವಿಚಾರ. ನನಗೆ ಅನ್ನಿಸೋದು ಸ್ಥಳೀಯ ವಿಚಾರಗಳು ಮುಖ್ಯ ಆಗಬೇಕು. ಬೆಂಗಳೂರು ಅಭಿವೃದ್ಧಿ ಕಂಡಿದೆ. ಜನಸಂಖ್ಯೆಯೂ ಹೆಚ್ಚು. ಇದನ್ನೆಲ್ಲಾ ಹೇಗೆ ನಿಭಾಯಿಸುತ್ತಾರೆ ಎನ್ನುವುದು ಗಮನಿಸಬೇಕು. ಮಹಿಳೆಯರ ಸುರಕ್ಷತೆಯೂ ಆಧ್ಯತೆ. ಕೆಲಸಕ್ಕೆ ಹೋಗುವ ನಾವು, ಸುರಕ್ಷಿತವಾಗಿ ಮನೆಗೆ ಬರುತ್ತೇವೆಯೇ ಎನ್ನವುದು ನನಗೆ ಮುಖ್ಯವಾಗುತ್ತದೆ. ಮನೆಯಲ್ಲಿ ಯಾವಾಗಲೂ ಬೆಳಿಗ್ಗೆಯೇ ಮತ ಹಾಕಿ ಬರುವುದು ರೂಢಿ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT