ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ರಲ್ಲಿ 18 ಸರ್ಕಾರಿ ರಜಾ ದಿನಗಳು

Last Updated 22 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ 2020ನೇ ಸಾಲಿಗೆ ಸಾರ್ವತ್ರಿಕ ರಜಾ ದಿನಗಳನ್ನು ಪ್ರಕಟಿಸಿದ್ದು, ನೌಕರರಿಗೆ 18 ದಿನಗಳು ರಜೆ ಸಿಗಲಿವೆ. ಪ್ರತಿ ತಿಂಗಳ 2ನೇ ಹಾಗೂ 4ನೇ ಶನಿವಾರದ ರಜೆಗಳು ಎಂದಿನಂತೆ ಮುಂದುವರಿದಿವೆ.

ಭಾನುವಾರ ಬಂದಿರುವ ಗಣರಾಜ್ಯೋತ್ಸವ (ಜನವರಿ 26), ಬಸವ ಜಯಂತಿ, ಅಕ್ಷಯ ತೃತೀಯ (ಏಪ್ರಿಲ್ 26), ಮೊಹರಂ ಕಡೇ ದಿನ (ಆಗಸ್ಟ್ 30), ಆಯುಧಪೂಜೆ (ಅಕ್ಟೋಬರ್ 25), ಕನ್ನಡ ರಾಜ್ಯೋತ್ಸವ (ನವೆಂಬರ್ 1) ಹಾಗೂ ಎರಡನೇ ಶನಿವಾರ ಬಂದಿರುವ ನರಕ ಚತುರ್ದಶಿ (ನವೆಂಬರ್ 14), ನಾಲ್ಕನೇ ಶನಿವಾರದಂದು ಬಂದಿರುವ ವರಸಿದ್ಧಿ ವಿನಾಯಕ ವ್ರತ (ಆಗಸ್ಟ್ 22) ರಜಾ ದಿನಗಳನ್ನು ಪಟ್ಟಿಯಲ್ಲಿ ಸೇರಿಸಿಲ್ಲ.

ಸೆಪ್ಟೆಂಬರ್ 3ರಂದು ಕೈಲ್ ಮುಹೂರ್ತ, ಅಕ್ಟೋಬರ್ 17ರಂದು ತುಲಾ ಸಂಕ್ರಮಣ, ಡಿಸೆಂಬರ್ 1ರಂದು ಹುತ್ತರಿ ಹಬ್ಬ ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯಿಸುವಂತೆ ಸ್ಥಳೀಯವಾಗಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಸಾರ್ವಜನಿಕ ರಜಾ ದಿನಗಳ ಜತೆಗೆ ಎರಡು ದಿನಗಳಿಗೆ ಮೀರದಂತೆ ನಿರ್ಬಂಧಿತ ರಜೆಯನ್ನು ಪೂರ್ವಾನುಮತಿ ಪಡೆದು ತೆಗೆದುಕೊಳ್ಳಬಹುದು.ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಿಸಲಿದ್ದಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತಿಳಿಸಿದೆ.

ರಜೆ ವಿವರ

ಜನವರಿ 15 ಮಕರ ಸಂಕ್ರಾಂತಿ,ಫೆಬ್ರವರಿ 21 ಮಹಾಶಿವರಾತ್ರಿ,ಮಾರ್ಚ್ 25 ಯುಗಾದಿ,ಏಪ್ರಿಲ್ 6 ಮಹಾವೀರ ಜಯಂತಿ,ಏಪ್ರಿಲ್ 10 ಗುಡ್‌ಪ್ರೈಡೆ,ಏಪ್ರಿಲ್ 14 ಅಂಬೇಡ್ಕರ್ ಜಯಂತಿ,ಮೇ 1 ಕಾರ್ಮಿಕ ದಿನಾಚರಣೆ,ಮೇ 25 ರಂಜಾನ್,ಆಗಸ್ಟ್ 1 ಬಕ್ರೀದ್,ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ,ಸೆಪ್ಟೆಂಬರ್ 17 ಮಹಾಲಯ ಅಮಾವಾಸ್ಯೆ,ಅಕ್ಟೋಬರ್ 2 ಗಾಂಧಿ ಜಯಂತಿ,ಅಕ್ಟೋಬರ್ 26 ವಿಜಯದಶಮಿ,ಅಕ್ಟೋಬರ್ 30 ಈದ್–ಮಿಲಾದ್,ಅಕ್ಟೋಬರ್ 31 ಮಹರ್ಷಿ ವಾಲ್ಮೀಕಿ ಜಯಂತಿ,ನವೆಂಬರ್ 16 ಬಲಿಪಾಡ್ಯಮಿ,ಡಿಸೆಂಬರ್ 3 ಕನಕದಾಸ ಜಯಂತಿ,ಡಿಸೆಂಬರ್ 25 ಕ್ರಿಸ್‌ಮಸ್.

ನಿರ್ಬಂಧಿತ ರಜಾ ದಿನ

ಜನವರಿ 1 ನೂತನ ವರ್ಷಾರಂಭ,ಫೆಬ್ರುವರಿ 3 ಮಧ್ವ ನವಮಿ,ಮಾರ್ಚ್ 9 ಹೋಳಿ,ಏಪ್ರಿಲ್ 2 ಶ್ರೀರಾಮನವಮಿ,ಏಪ್ರಿಲ್ 9 ಷಬ್‌–ಎ–ಬರಾತ್,ಏಪ್ರಿಲ್ 13 ಸೌರಮಾನ ಯುಗಾದಿ,ಏಪ್ರಿಲ್ 28 ಶಂಕರಾಚಾರ್ಯ ಜಯಂತಿ/ರಾಮಾನುಜಾಚಾರ್ಯ ಜಯಂತಿ,ಮೇ 7 ಬುದ್ಧ ಪೂರ್ಣಿಮಾ,ಮೇ 20 ಷಬ್–ಎ–ಖದ್ರ್,ಮೇ 22 ಜಮಾತ್–ಉಲ್–ವಿದಾ,ಜುಲೈ 31 ವರಮಹಾಲಕ್ಷ್ಮಿ ಹಬ್ಬ,ಆಗಸ್ಟ್ 11 ಕೃಷ್ಣ ಜನ್ಮಾಷ್ಟಮಿ,ಆಗಸ್ಟ್ 21 ಸ್ವರ್ಣಗೌರಿ ವ್ರತ,ಆಗಸ್ಟ್ 31 ಓಣಂ/ ಅನಂತಪದ್ಮನಾಭ ವ್ರತ/ ಋಗ್ ಉಪಾಕರ್ಮ,ಸೆಪ್ಟೆಂಬರ್ 1 ಯಜುರ್ ಉಪಾಕರ್ಮ,ಸೆಪ್ಟೆಂಬರ್ 2 ಬ್ರಹ್ಮಶ್ರೀ ನಾರಾಯಣಗುರು ಜಯಂತಿ,ಸೆಪ್ಟೆಂಬರ್ 8 ಕನ್ಯಾಮಾರಿಯಮ್ಮ ಜಯಂತಿ,ಅಕ್ಟೋಬರ್ 17 ತಲಾ ಸಂಕ್ರಮಣ,ನವೆಂಬರ್ 30 ಗುರುನಾನಾಕ್ ಜಯಂತಿ,ಡಿಸೆಂಬರ್ 1 ಹುತ್ತರಿ ಹಬ್ಬ,ಡಿಸೆಂಬರ್ 24 ಕ್ರಿಸ್‌ಮಸ್ ಈವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT