ಕೊನೆಗೂ ಕೊನೆಯುಸಿರೆಳೆದ ಹೆಣ್ಣುಮಗು

7

ಕೊನೆಗೂ ಕೊನೆಯುಸಿರೆಳೆದ ಹೆಣ್ಣುಮಗು

Published:
Updated:
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸುತ್ತಿರುವ ತಂದೆ ಸಂದೀಪ ಜಾಡರ, ತಾಯಿ ಗೀತಾ.

ಬೆಳಗಾವಿ: ಸ್ಮಶಾನಕ್ಕೆ ಹೋಗಿ ಜೀವಂತವಾಗಿ ಮರಳುವ ಮೂಲಕ ಗಮನಸೆಳೆದಿದ್ದ, ಎರಡು ತಿಂಗಳ ಹೆಣ್ಣು ಮಗು ಚಿಕಿತ್ಸೆ ಫಲಕಾರಿಯಾಗದೇ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ರಾತ್ರಿ ಕೊನೆಯುಸಿರು ಎಳೆದಿದೆ.

ಇಲ್ಲಿನ ಶಹಾಪುರದ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮನ್‌ ಆಗಿರುವ ಸಂದೀಪ ಜಾಡರ ಹಾಗೂ ಗೀತಾ ದಂಪತಿಗೆ ಸೇರಿದ ಮಗು ಇದಾಗಿದ್ದು, ಮಗುವಿಗೆ ಹುಟ್ಟಿನಿಂದಲೇ ಮೆದುಳು ಸಂಬಂಧಿತ ಕಾಯಿಲೆ ಇತ್ತು. ಹಲವು ವೈದ್ಯರ ಬಳಿ ತೋರಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಗಮನ ಸೆಳೆದಿದ್ದ ಮಗು: ಇದಕ್ಕೂ ಮುಂಚೆ ಸೋಮವಾರ ತಮ್ಮ ಮಗು ಸಾವನ್ನಪ್ಪಿದೆ ಎಂದು ಭಾವಿಸಿದ್ದ ಜಾಡರ ದಂಪತಿ, ಅಂತ್ಯಸಂಸ್ಕಾರ ನಡೆಸಲು ಸ್ಮಶಾನಕ್ಕೆ ಹೋಗಿದ್ದರು. ಆಗ ಮಗು ಕೈ– ಕಾಲು ಅಲುಗಾಡಿಸಿತ್ತು. ಇದನ್ನು ನೋಡಿದ ಕಾವಲುಗಾರನೊಬ್ಬ, ಜೀವಂತ ಮಗುವನ್ನೇಕೆ ಅಂತ್ಯಸಂಸ್ಕಾರ ಮಾಡಲು ತಂದಿದ್ದೀರಿ ಎಂದು ಬೆದರಿಸಿ, ಕಳುಹಿಸಿದ್ದರು. ಅಲ್ಲಿಂದ ದಂಪತಿ ತಮ್ಮ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆತಂದು ದಾಖಲಿಸಿದ್ದರು.

ಈ ಪ್ರಕರಣವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಜೀವಂತ ಮಗುವನ್ನು ಅಂತ್ಯಸಂಸ್ಕಾರ ಮಾಡಲು ಪೋಷಕರು ಪ್ರಯತ್ನಿಸಿದ್ದರೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು, ಪೋಷಕರನ್ನು ಪತ್ತೆ ಹಚ್ಚಿದ್ದರು.

‘ನಮ್ಮ ಹೆಣ್ಣು ಮಗುವಿಗೆ ಹುಟ್ಟಿನಿಂದಲೇ ಮೆದುಳು ಸಂಬಂಧಿತ ಕಾಯಿಲೆ ಇತ್ತು. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಅಲ್ಲಿನ ವೈದ್ಯರು ಮಗು ಮೃತಪಟ್ಟಿದೆ ಎಂದು ಹೇಳಿದ್ದರು. ಅವರ ಮಾತನ್ನು ನಂಬಿ, ಅಂತ್ಯಸಂಸ್ಕಾರ ನಡೆಸಲು ಸ್ಮಶಾನಕ್ಕೆ ಹೋಗಿದ್ದೆವೇ ಹೊರತು, ಜೀವಂತ ಮಗುವನ್ನು ಸಮಾಧಿ ಮಾಡಲು ಅಲ್ಲ’ ಎಂದು ಸಂದೀಪ ಜಾಡರ ಪೊಲೀಸರಿಗೆ ತಿಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !