ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27 ಸಾವಿರ ಎಂಜಿನಿಯರಿಂಗ್‌ ಸೀಟು ಖಾಲಿ

4ನೇ ಸುತ್ತಿನ ಕೌನ್ಸೆಲಿಂಗ್‌ ಪ್ರಕ್ರಿಯೆ: ವಿದ್ಯಾರ್ಥಿಗಳಿಂದ ಸೀಟು ಆಯ್ಕೆಗೆ ನಿರಾಸಕ್ತಿ
Last Updated 31 ಆಗಸ್ಟ್ 2019, 20:48 IST
ಅಕ್ಷರ ಗಾತ್ರ

ಬೆಂಗಳೂರು: ನಾಲ್ಕನೇ ಸುತ್ತಿನ ಕೌನ್ಸೆಲಿಂಗ್‌ ಬಳಿಕವೂ 27 ಸಾವಿರದಷ್ಟು ಎಂಜಿನಿಯರಿಂಗ್‌ ಸೀಟುಗಳು ಖಾಲಿ ಉಳಿದಿವೆ. ಎಂಜಿನಿಯರಿಂಗ್‌ ಕೋರ್ಸ್‌ಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಂದ ನಿರಾಸಕ್ತಿ ಕಂಡುಬಂದಿದೆ.

ಸಿಇಟಿ ಮೂಲಕ 65 ಸಾವಿರ ಸೀಟುಗಳ ಆಯ್ಕೆಗೆ ಅವಕಾಶ ಇತ್ತು. ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಈ ಬಾರಿ 4 ಸುತ್ತು ಕೌನ್ಸೆಲಿಂಗ್ ನಡೆಸಲಾಗಿತ್ತು. ಹಾಗಿದ್ದರೂ ಒಟ್ಟು ಆಯ್ಕೆ ಮಾಡಿಕೊಂಡ ಸೀಟುಗಳ ಸಂಖ್ಯೆ 38 ಸಾವಿರದಷ್ಟು ಮಾತ್ರ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ)ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

3ನೇ ಸುತ್ತಿನ ಕೌನ್ಸೆಲಿಂಗ್‌ ಬಳಿಕ 22 ಸಾವಿರದಷ್ಟು ಸೀಟುಗಳು ಖಾಲಿ ಇದ್ದವು. ನಾಲ್ಕನೇ ಸುತ್ತಿನ ಬಳಿಕ ಅದರ ಬಾಕಿ ಉಳಿಸಿದ ಸೀಟುಗಳ ಸಂಖ್ಯೆ ಕಡಿಮೆಯಾಗುವ ಬದಲಿಗೆ ಏರಿಕೆಯಾಗಿದೆ.

ಪಿಜಿಸಿಇಟಿ ಅವಧಿ ವಿಸ್ತರಣೆ: 2019ರ ಪಿಜಿಸಿಇಟಿಗೆ ದಾಖಲೆಗಳ ಪರಿಶೀಲನೆ ಅವಧಿಯನ್ನು ಸೆ.3ರವರೆಗೆ ವಿಸ್ತರಿಸಲಾಗಿದೆ.

ಈವರೆಗೆ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳದವರು ಸಹಾಯವಾಣಿ ಕೇಂದ್ರಗಳಲ್ಲಿ ಸೆ.3ರಂದು ಬೆಳಿಗ್ಗೆ 10.30ರಿಂದ ಸಂಜೆ 4.30ರೊಳಗೆ ಮಾಡಿಸಿಕೊಳ್ಳಬೇಕು ಎಂದು ಕೆಇಎ ಪ್ರಕಟಣೆ ತಿಳಿಸಿದೆ.

**

ವಿಭಾಗ ಖಾಲಿ

ಮೆಕ್ಯಾನಿಕಲ್‌ 8,500

ಕಂಪ್ಯೂಟರ್ ಸೈನ್ಸ್‌ 5,500

ಸಿವಿಲ್‌ 5,000

ಎಲೆಕ್ಟ್ರಿಕಲ್‌ 2,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT