ಗುರುವಾರ , ನವೆಂಬರ್ 14, 2019
19 °C

ಎರಡನೇ ಜೊತೆ ಸಮವಸ್ತ್ರಕ್ಕೆ ಆದೇಶ

Published:
Updated:

ಬೆಂಗಳೂರು: ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ಓದುತ್ತಿರುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಎರಡನೇ ಜೊತೆ ಸಮವಸ್ತ್ರ ವಿತರಿಸುವ ಸಂಬಂಧ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.

ಪ್ರತಿ ಸಮವಸ್ತ್ರಕ್ಕೆ ₹250 ವೆಚ್ಚವಾಗಲಿದ್ದು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಮೂಲಕ ಎರಡನೇ ಜೊತೆ ಸಮವಸ್ತ್ರ ವಿತರಣೆ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಲಾಗಿದೆ.

ತಿಳಿ ನೀಲಿ ಬಣ್ಣದ ಅಂಗಿ, ಗಾಢ ನೀಲಿ ಬಣ್ಣದ ಪ್ಯಾಂಟು/ ಲಂಗವನ್ನು ಸಮವಸ್ತ್ರವಾಗಿ ವಿತರಿಸಬೇಕು. ಇದಕ್ಕಾಗಿ ₹ 94 ಕೋಟಿ ಬಿಡುಗಡೆ ಮಾಡಲಾಗಿದೆ. 15 ದಿನಗಳ ಒಳಗೆ ಸಮವಸ್ತ್ರ ಖರೀದಿಸಿ ವಿತರಿಸಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಪ್ರತಿಕ್ರಿಯಿಸಿ (+)