ಗುರುವಾರ , ಸೆಪ್ಟೆಂಬರ್ 19, 2019
29 °C

ಮೂರು ಚಿರತೆಗಳ ಕಳೇಬರ ಪತ್ತೆ: ವಿಷಪ್ರಾಶನ ಶಂಕೆ

Published:
Updated:
Prajavani

ನಂಜನಗೂಡು: ತಾಲ್ಲೂಕಿನ ಹಲ್ಲೆರೆ ಗ್ರಾಮದ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದ ಜಮೀನೊಂದರಲ್ಲಿ, ಐದು ವರ್ಷ ವಯಸ್ಸಿನ ಹೆಣ್ಣು ಚಿರತೆ ಹಾಗೂ ಐದು ತಿಂಗಳ ಎರಡು ಮರಿಗಳ ಮೃತದೇಹ ಸೋಮವಾರ ಪತ್ತೆಯಾಗಿವೆ.

ಮೇಲ್ನೋಟಕ್ಕೆ ದೇಹದ ಮೇಲೆ ಯಾವುದೇ ಗಾಯದ ಗುರುತು ಕಂಡು ಬಂದಿಲ್ಲ. ಮೂರೂ ಕಳೇಬರಗಳು 100 ಮೀಟರ್‌ ಅಂತರದಲ್ಲಿ ಪತ್ತೆಯಾಗಿದ್ದು, ವಿಷ ಹಾಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ.

ಚಿರತೆಗಳು ಶನಿವಾರ ಮೃತಪಟ್ಟಿರಬಹುದು ಎಂದು ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಅಂದಾಜಿಸಿದ್ದಾರೆ. ಮರಿಗಳಲ್ಲಿ ಒಂದು ಗಂಡು, ಮತ್ತೊಂದು ಹೆಣ್ಣು.

 

Post Comments (+)