ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಪಡೆದಿದ್ದ ತಹಶೀಲ್ದಾರ್‌ಗೆ 3ವರ್ಷ ಶಿಕ್ಷೆ

Last Updated 27 ಅಕ್ಟೋಬರ್ 2018, 18:50 IST
ಅಕ್ಷರ ಗಾತ್ರ

ಶಿವಮೊಗ್ಗ:ಮರಳು ಪರವಾನಗಿ ನೀಡಲು ₹ 10 ಸಾವಿರ ಲಂಚ ಪಡೆದಿದ್ದ ತಹಶೀಲ್ದಾರ್‌ಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 3 ವರ್ಷ ಕಠಿಣ ಶಿಕ್ಷೆ ಹಾಗೂ ₹ 20 ಸಾವಿರ ದಂಡ ವಿಧಿಸಿದೆ.

2009ರಲ್ಲಿ ತೀರ್ಥಹಳ್ಳಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದ ಕೇಶವರಾಜ್‌ ಶಿಕ್ಷೆಗೆ ಒಳಗಾದವರು.

ತಾಲ್ಲೂಕಿನ ರಂಜದಕಟ್ಟೆ ದೂರ್ವಾಸಪುರದ ಕೆ. ಭಾಸ್ಕರಶೆಟ್ಟಿ ಅವರು ತಮ್ಮ ಮನೆಯ ಪಕ್ಕ 50 ಲೋಡ್‌ ಮರಳು ದಾಸ್ತಾನು ಮಾಡಲು ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅದಕ್ಕಾಗಿ ಕೇಶವರಾಜ್ ₹ 10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು.ಹಣ ಪಡೆಯುವಾಗ ಲೋಕಾ
ಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದರು.

ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ವಕೀಲರಾದ ಗೀತಾ ಶಿವಮೂರ್ತಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT