ಹಾವೇರಿ: 41 ಡಿಗ್ರಿ ಸೆಲ್ಸಿಯಸ್ ದಾಖಲು

ಭಾನುವಾರ, ಏಪ್ರಿಲ್ 21, 2019
32 °C

ಹಾವೇರಿ: 41 ಡಿಗ್ರಿ ಸೆಲ್ಸಿಯಸ್ ದಾಖಲು

Published:
Updated:

ಹಾವೇರಿ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಬಿಸಿಲಿನ ಝಳ ಹೆಚ್ಚಿದ್ದು, ಗುರುವಾರ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕನಿಷ್ಠ ತಾಪಮಾನ 19.60 ಡಿಗ್ರಿ ಸೆಲ್ಸಿಯಸ್‌ ಇತ್ತು.

ಬುಧವಾರ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಆದರೆ, ಸಂಜೆಯ ವೇಳೆಗೆ ಜಿಲ್ಲೆಯ ವಿವಿಧೆಡೆ ಮಳೆಯಾಗಿತ್ತು.

‘ಈಚಿನ ಕೆಲ ವರ್ಷಗಳ ವಾಡಿಕೆಯಂತೆ ಏಪ್ರಿಲ್‌ ತಿಂಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಈ ವರ್ಷ ರಾಜ್ಯದಲ್ಲಿ ವಾಡಿಕೆಗಿಂತ 2 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಿದೆ. ಅಧಿಕ ತಾಪಮಾನದ ಪರಿಣಾಮ ವಾಯುಭಾರದಲ್ಲಿ ವ್ಯತ್ಯಯವಾಗಿ ಸಂಜೆ ವೇಳೆ ಮಳೆ ಬರುತ್ತಿದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಘಟಕದ ಮೂಲಗಳು ತಿಳಿಸಿವೆ.

‘ಮಧ್ಯಾಹ್ನ 12 ಗಂಟೆ ಬಳಿಕ ಅಂಗಡಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮಧ್ಯಾಹ್ನ ಮನೆಗೆ ಹೋಗುತ್ತೇವೆ. ಸಂಜೆ 4ರ ಬಳಿಕವೇ ಅಂಗಡಿ ತೆರೆಯುತ್ತೇವೆ’ ಎಂದು ರಟ್ಟೀಹಳ್ಳಿಯ 75ರ ಹರೆಯದ ವ್ಯಾಪಾರಿ ಮಾರುತೆಪ್ಪ ಸುಣಗಾರ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !